ಉಡುಪಿ, ಮಾ.30 (DaijiworldNews/PY) : ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ವೈರಸ್ ಸೋಂಕಿನ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಅಗತ್ಯ ಸುರಕ್ಷತಾ ಕ್ರಮಗಳಿಗೆ ನೆರವಾಗುವ ಸಲುವಾಗಿ ಅವರು ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಿಂದ ಒಂದು ಕೋಟಿ ನೆರವು ನೀಡಿದ್ಧಾರೆ.
ಈ ಕುರಿತು ಅವರು ಟ್ವಿಟ್ಟರ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆ ಅವರು ವೈಯುಕ್ತಿಕವಾಗಿ ಒಂದು ತಿಂಗಳ ವೇತನ ಒಂದು ಲಕ್ಷ ರೂಪಾಯಿಯನ್ನು ಶೋಭಾ ಕರಂದ್ಲಾಜೆ ಅವರು ನೀಡಿದ್ದಾರೆ.
ಇದುವರೆಗೆ ಉಡುಪಿಯಲ್ಲಿ 3 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಭಾನುವಾರ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ವಿಚಾರವಾಗಿ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದರು.