ಭಟ್ಕಳ, ಮಾ.30 (Daijiworld News/MB) : ಕೊರೊನಾ ಶಂಕಿತ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಭಾನುವಾರ ರಾತ್ರಿ ಪರಾರಿಯಾಗಿದ್ದು ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಮರಳಿ ದಾಖಲಿಸಿರುವುದಾಗಿ ವರದಿಯಾಗಿದೆ.
ಕೊರೊನಾ ಶಂಕೆಯಿಂದಾಗಿ ಕಳೆದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಭಾನುವಾರ ಬೆಳಿಗ್ಗಿನಿಂದ ಆಸ್ಪತ್ರೆಯ ಸುತ್ತಮುತ್ತ ಮಾಸ್ಕ್ ಧರಿಸಿ ಓಡಾಡಿಕೊಂಡಿದ್ದ ಯುವತಿಯೋರ್ವಳು ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ವರದಿ ತಿಳಿಸಿದೆ.
ಆತನಿಗೆ ಜ್ವರ ಹಾಗೂ ಗಂಟಲು ನೋವು ಇದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈತ ಕೊರೊನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಜೊತೆಗೆ ಕೊರೊನಾ ಲಕ್ಷಣ ಕಂಡು ಬಂದಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು.
ಆದರೆ ಇದರಿಂದಾಗಿ ಭಯಗೊಂಡ ಆತ ಪರಾರಿಯಾಗಿ ತನ್ನ ಮನೆ ಸೇರಿಕೊಂಡಿದ್ದ. ಮಾಹಿತಿ ತಿಳಿದ ಭಟ್ಕಳ ಪೊಲೀಸರು ಈತನ ಮನೆಗೆ ತೆರಳಿ ಕೌನ್ಸಿಲಿಂಗ್ ಮಾಡಿ ಭಟ್ಕಳ ಆಸ್ಪತ್ರೆಗೆ ಮರಳಿ ಕರೆ ತಂದಿದ್ದಾರೆ.