ಮಂಗಳೂರು, ಮಾ 30 (DaijiworldNews/SM): ದ.ಕ. ಜಿಲ್ಲೆಯಲ್ಲಿ ಇಂದು ಕೂಡ ಸಿಹಿ ಸುದ್ದಿ ಲಭಿಸಿದ್ದು, 9 ಪರೀಕ್ಷಾ ಮಾದರಿಗಳು ಲಭ್ಯವಾಗಿದ್ದು, ಎಲ್ಲಾ ಪ್ರಕರಣಗಳು ನೆಗೆಟಿವ್ ವರದಿಯಾಗಿ ಲಭಿಸಿದೆ.
ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸರು ವಹಿಸಿಕೊಂಡಿರುವ ನಿಗಾದಿಂದಾಗಿ ಕಳೆದ ಎರಡು ದಿನಗಳಲ್ಲಿ ಲಭಿಸಿದ್ದ ನೆಗೆಟಿವ್ ವರದಿ ಸೋಮವಾರವೂ ಕೂಡ ಮುಂದುವರೆದಿದೆ. ಒಟ್ಟು ಒಂಬತ್ತು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಜಿಲ್ಲಾಡಳಿತದಿಂದ ಇಂದು ಲಭ್ಯವಾದ ಕೊರೊನಾ ವರದಿ:
9 ಮಂದಿ - ಪರೀಕ್ಷಾ ವರದಿ ಲಭ್ಯ
9 ಮಂದಿ - ಕೊರೊನಾ ನೆಗೆಟಿವ್
4 ಮಂದಿ - ನಿಗಾ ವಹಿಸಲು ಆಸ್ಪತ್ರೆಗೆ ದಾಖಲು
8 ಮಂದಿ - ಪರೀಕ್ಷೆಗಾಗಿ ಮಾದರಿ ಕಳುಹಿಸಲ್ಪಟ್ಟವರು
169 ಮಂದಿ - ಇಪ್ಪತ್ತೆಂಟು ದಿನಗಳ ಕ್ವಾರಂಟೇನ್ ಪೂರೈಸಿದವರು
28 ಮಂದಿ - ಇಎಸ್ ಐ ಆಸ್ಪತ್ರೆಯಲ್ಲಿ ದಾಖಲಾದವರು
48 ಮಂದಿ - ಸ್ಕ್ರೀನಿಂಗ್ ಗೆ ಒಳಪಡಿಸಿದವರು
5875 ಮಂದಿ - ಮನೆಯಲ್ಲೇ ನಿಗಾದಲ್ಲಿರುವವರು