ಉಡುಪಿ, ಮಾ 30 (DaijiworldNews/SM): ಮದ್ಯ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುವವರಿಗೆ ಉಡುಪಿ ಜಿಲ್ಲಾಡಳಿತದ ವತಿಯಿಂದ ಸಮಾಲೋಚನೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾ ಮಟ್ಟದ ತಂಡ ಹಾಗೂ ಮನೋತಜ್ಞರಾದ ಡಾ. ಪಿವಿ ಭಂಡಾರಿ ಅವರ ಜೊತೆ ಮಾತನಾಡಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಟುಂಬಸ್ಥರು ಯಾರೂ ಜಿಲ್ಲಾಡಳಿತಕ್ಕೆ ಈವರೆಗೆ ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಆಯಾ ಮನೆಯವರು ನಮ್ಮ ಗಮನಕ್ಕೆ ತಂದರೆ ಅಥವಾ ನಮ್ಮ ಆರೋಗ್ಯ ಇಲಾಖೆಯ ಕಾಲ್ ಸೆಂಟರ್ಗೆ ಕರೆ ಮಾಡಿದರೆ ಆ ವ್ಯಕ್ತಿಗೆ ಸಮಾಲೋಚನೆ ಮಾಡಿ ಸರಿಪಡಿಸುವ ಕೆಲಸ ಮಾಡಲಾಗುವುದು. ಜನ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿ ಸರಕಾರ ಮದ್ಯಪ್ರವೇಶ ಮಾಡಬೇಕಾಗುತ್ತದೆ ಎಂದವರು ಹೇಳಿದರು.