ಕಾಸರಗೋಡು, ಫೆ.26 : ಇಲಿ ಪ್ರಾಷಣ ವನ್ನು ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಬದಿಯಡ್ಕದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬದಿಯಡ್ಕ ಚೆನ್ನಾರಕಟ್ಟೆಯ ರತೀಶ್ ( 32) ಎಂದು ಗುರುತಿಸಲಾಗಿದೆ . ಫೆ. 20 ರಂದು ರತೀಶ್ ವಿಷ ಸೇವನೆ ಮಾಡಿದ್ದರು. ಗಂಭೀರ ಸ್ಥಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟರು. ಕಾಂಕ್ರೀಟ್ ಕಾರ್ಮಿಕ ರಾಗಿದ್ದರು. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.