ಕಾಸರಗೋಡು, ಮಾ 31 (Daijiworld News/MSP): ಕೊರೋನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟುತ್ತಿದ್ದಂತೆ ಕಾಸರಗೋಡು ನಗರಸಭೆ ಮತ್ತು ಪರಿಸರದ ಐದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಗಾ ಇರಿಸಿರುವುದರ ಜೊತೆ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.
ನಗರಸಭೆ ಅಲ್ಲದೆ ಮಧೂರು , ಮೊಗ್ರಾಲ್ ಪುತ್ತೂರು , ಚೆಮ್ನಾಡ್ ಪಳ್ಳಿಕೆರೆ , ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದು , ಜನರು ಮನೆಯಿಂದ ಹೊರಬಾರದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದ್ದು , ಕಾರಿನಲ್ಲಿ ಚಾಲಕ ಹಾಗೂ ಒಬ್ಬರು , ದ್ವಿಚಕ್ರ ವಾಹನದಲ್ಲಿ ಓರ್ವನಿಗೆ ಮಾತ್ರ ಸಂಚಾರ ನಡೆಸಬಹುದು . ಸಾಮಗ್ರಿ ಖರೀದಿಸಲು ಒಂದು ಮನೆಯಿಂದ ಒಬ್ಬನಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕಾಸರಗೋಡು ನಗರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಅತ್ಯಧಿಕ ಸೋಂಕಿತರಿದ್ದು , ಚೆಂಗಳ ಗ್ರಾಮ ಪಂಚಾಯತ್ ವೊಂದರಲ್ಲೇ ಸೋಂಕಿತರ ಸಂಖ್ಯೆ 30 ರಷ್ಟಿದೆ