ಕಾರ್ಕಳ, ಮಾ 31 (Daijiworld News/MSP): ಸರಕಾರ ಅದೇಶದೊಂದಿಗೆ ನಾಗರಿಕರ ಬವಣೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಿದಾಗ ಮಾತ್ರ ಯೋಜನೆಯಗಳು ಸಕಾರಗೊಳ್ಳಲು ಕಾರಣವಾಗುತ್ತದೆ. ಕರೊನಾ ವೈರಸ್ ನಿಗ್ರಹಿಸುವ ನಿಟ್ಟಿನಲ್ಲಿ ಕ್ವಾರಂಟೈನ್ ಕೇಂದ್ರ ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಉದ್ಯೋಗ ಅರಸಿ ಕಾರ್ಕಳಕ್ಕೆ ಬಂದಿರುವ ಕೂಲಿ ಕಾರ್ಮಿಕರಿಗೆ ಕುಕ್ಕುಂದೂರು ಅರಣ್ಯಾಧಿಕಾರಿ ಕಚೇರಿಯ ಹಿಂಭಾಗದ ಬಿ.ಸಿ.ಎಮ್ ಹಾಸ್ಟೆಲ್ ನಿರಾಶ್ರಿತರ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳವಾರ ಬೆಳಿಗ್ಗೆ 40 ಮಂದಿ ನಿರಾಶ್ರಿತರು ಶಿಬಿರಕ್ಕೆ ಎಂಟ್ರಿ ಪಡೆದಿದ್ದಾರೆ. ಸಂಜೆಯೊಳಗಾಗಿ ಇನ್ನಷ್ಟು ನಿರಾಶ್ರಿತರ ಸಂಖ್ಯೆ ಹೆಚ್ಚಾಗುವ ವ ಸಾಧ್ಯತೆ ಇದೆ. ದೇಶ ವ್ಯಾಪ್ತಿಯಲ್ಲಿ ಲಾಕ್ಡೋನ್ ಮುಗಿಯುವ ವರೆಗೆ ಇದೇ ಶಿಬಿರದಲ್ಲಿ ನಿರಾಶ್ರಿತರು ವಾಸ್ತ್ರವ್ಯ ಹೂಡಿದರೆ ಮಾತ್ರವೇ ಅವರಿಗೆ ಉಪಹಾರ ಹಾಗೂ ಭೋಜನದ ವ್ಯವಸ್ಥೆ ನೀಡಲಾಗುತ್ತಿದೆ. ಶಿಬಿರದಲ್ಲಿ ವೈದ್ಯಕೀಯ ಸಲವತ್ತು ಇರಲಿದೆ. ಬೆಳಿಗ್ಗಿನ ಉಪಾಹಾರಕ್ಕೆ ಮಸಾಲೆ ಅವಲಕ್ಕಿ,ಸಜ್ಜಿಗೆ ಮಧ್ಯಾಹ್ನ ಅನ್ನ, ದಾಳಿತೋವೆ ರಾತ್ರಿ ಅನ್ನ, ಸಾಂಬಾರು ಪಲ್ಯವನ್ನು ಬಂಡೀಮಠ ಮೂಡುಗಣಪತಿ ದೇವಸ್ಥಾನದಲ್ಲಿ ಸಿದ್ಧಪಡಿಸಲಾಯಿತು. ಇತರ ದಿನಗಳಲ್ಲಿ ತಿಂಡಿ , ಪದಾರ್ಥಗಳನ್ನು ನಾನಾ ರೀತಿಯಲ್ಲಿ ತಯಾರಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಶಿಬಿರದ ಆಯೋಜಕ ಹರೀಶ್ ಶೆಣೈ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ. ಹರ್ಷ, ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಕಂದಾಯ ವೀಕ್ಷಕ ಶಿವಪ್ರಸಾದ್, ಪುರಸಭಾ ಪರಿಸರ ಅಭಿಯಂತರ ಮದನ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಮಹಮ್ಮದ್ ಶರೀಫ್, ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ರಾವ್, ಕುಕ್ಕುಂದೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಮೊದಲಾದವರು ಉಪಸ್ಥಿತರಿದ್ದರು.