ಬೆಳ್ತಂಗಡಿ, ಫೆ 27: ಅಕ್ರಮವಾಗಿ ಬೊಲೇರೊ ವಾಹನದಲ್ಲಿ ಗೂಬೆ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಪುತ್ತೂರು ಅರಣ್ಯ ಸಂಚಾರಿ ಘಟಕದ ಪಿಎಸ್ಐ ಸುಂದರ್ ಪೂಜಾರಿ ಮತ್ತು ಸಿಬ್ಬಂದಿಗಳು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಬಳಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಆರಂಭಿಸಿದಾಗ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಕುಂಭ ಶ್ರೀ ಶಾಲೆಯ ಮುಂಭಾಗದಲ್ಲಿ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಮಂಗಳೂರಿನ ಬಜಪೆಯ ಪೆರ್ಮುಡೆಯ ಜೊಸೆಫ್ ಸುನಿಲ್ ರೊಡ್ರಿಗಸ್, ಉ.ಕ ಜಿಲ್ಲೆಯ ಕೃಷ್ಣಮೂರ್ತಿ ಧರ್ಮಬೋವಿ, ಉಡುಪಿಯ ಜಿಲ್ಲೆಯ ಅಂಬಲಪಾಡಿಯ ಪ್ರಶಾಂತ್.ಕೆ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2.5 ಲಕ್ಷದ ಬೊಲೋರೊ ವಾಹನ , ಸುಮಾರು 2 ಲಕ್ಷ ಮೌಲ್ಯದ ಗೂಬೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ವನ್ಯಜೀವಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.