ಮಂಗಳೂರು, ಏ 01 (Daijiworld News/MSP): ಕರಾವಳಿಯಲ್ಲಿ ಹುಟ್ಟಿಕೊಂಡ ದೇಶದ ಪ್ರತಿಷ್ಟಿತ ಬ್ಯಾಂಕ್ ಗಳಾದ ಕಾರ್ಪೋರೇಶನ್ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಏ.1ರಿಂದ ಆಸ್ತಿತ್ವ ಕಳೆದುಕೊಳ್ಳಲಿದ್ದು, ಗ್ರಾಹಕರ ಪಾಲಿಗೆ ನೆನಪು ಮಾತ್ರ.!
ಕೇಂದ್ರ ಸರಕಾರ ತೀರ್ಮಾನದಂತೆ ಕಾರ್ಪೋರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಹಾಗೂ ಸಿಂಡಿಕೇಟ್ ಬ್ಯಾಂಕ್ ಜತೆಗೆ ಹಾಗೂ ಸಿಂಡಿಕೇಟ್ ಬ್ಯಾಂಕ್ , ಕೆನರಾ ಬ್ಯಾಂಕ್ ನೊಂದಿಗೆ ಅಧಿಕೃತವಾಗಿ ವಿಲೀನವಾಗುತ್ತಿದೆ. ಬ್ಯಾಂಕ್ ಗಳ ವಿಲೀನದ ಪರಿಣಾಮ ಕರಾವಳಿ ಮೂಲದ ಬ್ಯಾಂಕ್ ಗಳು ಇತಿಹಾಸದ ಪುಟ ಸೇರುತ್ತಿವೆ. ಸಾರ್ವಜನಿಕ ಬ್ಯಾಂಕ್ ಗಳ ಪೈಕಿ ಕೆನರಾ ಬ್ಯಾಂಕ್ ಮಾತ್ರ ಉಳಿದುಕೊಳ್ಳಲಿದೆ. ಕೆನರಾ ಹಾಗೂ ಸಿಂಡಿಕೇಟ್ ಬ್ಯಾಂಕ್ ಗಳ ವಿಲೀನ ದಿಂದ ಕೆನರಾ ಬ್ಯಾಂಕ್ ದೇಶದ 4 ನೇ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಣಿಸಿಕೊಳ್ಳಲಿದೆ.
ಕೊರೊನಾ ಆತಂಕದ ಮಧ್ಯೆಯೂ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರಕಾರ ಅಧಿಕೃತ ಮುದ್ರೆ ಒತ್ತಿದೆ. ಕಳೆದ ಆಗಸ್ಟ್ ನಲ್ಲಿ ವಿಲೀನ ಘೋಷಣೆ ಮಾಡಿದ ಆನಂತ್ರ ವಿಲೀನ್ ಅಪ್ರಕ್ತಿಯೆ ಕೈಬಿಡುವಂತೆ ಕರಾವಳಿ ಹಾಗೂ ಇತರ ಭಾಗಗಳಿಂದ ಸಾಕಷ್ಟು ಆಗ್ರಹ ಹಾಗೂ ಪ್ರತಿಭಟನೆ ನಡೆದಿತ್ತು. ಆದರೆ ದೇಶದ ಬ್ಯಾಂಕಿಂಗ್ ವಲಯ ಸದೃಢಗೊಳಿಸುವ ಹಿನ್ನಲೆಯಲ್ಲಿ ವಿಲೀನ ಅನಿವಾರ್ಯತೆ ಎಂದು ಕೇಂದ್ರ ಹೇಳುತ್ತಲೇ ಬಂದಿತ್ತು.