ಮಂಗಳೂರು, ಏ 01 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೊನಾ ಆತಂಕ ಮುಂದುವರೆದಿದ್ದು, ಬುಧವಾರದಂದು ಮತ್ತೊಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಆತಂಕ ಮುಂದುವರೆದಿದೆ.
ಬುಧವಾರದಂದು ಹದಿನೇಳು ಮಂದಿಯ ಪರೀಕ್ಷಾ ಮಾದರಿಯ ವರದಿ ಲಭ್ಯವಾಗಿದೆ. ಈ ಪೈಕಿ 16 ಪ್ರಕರಣಗಳು ನೆಗೆಟಿವ್ ಆಗಿದ್ದು, 1 ಪ್ರಕರಣ ಪಾಸಿಟಿವ್ ಎಂಬುವುದಾಗಿ ದೃಢಪಟ್ಟಿದೆ.
ದುಬೈನಿಂದ ಬಂದಿದ್ದ ಪುತ್ತೂರು ಮೂಲದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಬುಧವಾರ ಲಭಿಸಿದ ಕೊರೊನಾ ವರದಿ:
ಒಟ್ಟು ಸ್ಕ್ರೀನಿಂಗ್ ಗೆ ಒಳಪಟ್ಟವರು - 53 ಮಂದಿ
ಮನೆಯಲ್ಲಿ ನಿಗಾದಲ್ಲಿರುವವರು - 5875 ಮಂದಿ
ಇ ಎಸ್ ಐ ಆಸ್ಪತ್ರೆಯಲ್ಲಿ ನಿಗಾದಲ್ಲಿರುವವರು - 27 ಮಂದಿ
೨೮ ದಿನಗಳ ನಿಗಾ ಪೂರೈಸಿದವರು - 300 ಮಂದಿ
ಪರೀಕ್ಷೆಗೆ ರವಾನಿಸಿದ ಮಾದರಿಗಳು - 16 ಮಂದಿ
ಇಂದು ಲಭ್ಯವಾದ ಪರೀಕ್ಷಾ ವರದಿ - 17 ಮಂದಿ
ನೆಗೆಟಿವ್ - 16
ಪಾಸಿಟಿವ್ - 01