ಉಡುಪಿ, ಏ 01 (DaijiworldNews/SM): ಕೊರೊನಾ ಮಹಾಮಾರಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವಾಗಲೇ ಇದರ ನಿಯಂತ್ರಣದ ಜವಾಬ್ದಾರಿ ಹಲವರು ವಹಿಸಿಕೊಂಡಿದ್ದಾರೆ. ಇದೀಗ ಉಡುಪಿ ಜಿಲ್ಲೆಗೆ ಸುಧಾ ಮೂರ್ತಿ ಇವರು ತಮ್ಮ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಮಾರು 54 ಲಕ್ಷ ರುಪಾಯಿ ಮೌಲ್ಯದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಉಡುಪಿ ಜಿಲ್ಲೆಗೆ ಕೆಲವೊಂದು ವೈದ್ಯಕೀಯ ಪರಿಕರಗಳು ಅಗತ್ಯವಾಗಿ ಬೇಕಾಗಿತ್ತು. ಈ ಬಗ್ಗೆ ದಾನಿಗಳ ನೆರವಿಗಾಗಿ ಎದುರು ನೋಡಲಾಗುತ್ತಿತ್ತು. ಈ ಸಂದರ್ಭ ಇನ್ಫೋಸಿಸ್ ಸಂಸ್ಥೆ ಗಮನಕ್ಕೆ ಬಂದಿದೆ. ಇದಕ್ಕಾಗಿ ನಾವು ಸುಧಾ ಮೂರ್ತಿ ಇವರಲ್ಲಿ ಕೇಳಿಕೊಂಡಾಗ ತಕ್ಷಣವೇ ಜಿಲ್ಲೆಗೆ ಬೇಕಾದ ಎನ್ 95 ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಟ್ರಿಪಲ್ ಲೇಯರ್ ಮಾಸ್ಕ್ ಹಾಗೂ ಸುಮಾರು 1000ದಷ್ಟು ಪಿಪಿಇ ಕಿಟ್ ಗಳನ್ನು ಒದಗಿಸಿ ಕೊಟ್ಟಿದ್ದಾರೆ.
ಇದಕ್ಕಾಗಿ ಸುಧಾ ಮೂರ್ತಿ ಹಾಗೂ ಇನ್ಫೋಸಿಸ್ ನ ಡಾಕ್ಟರ್ ರಾಮದಾಸ್ ಕಾಮತ್ ಸಹಕಾರ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.