ಮಂಗಳೂರು, ಏ 01 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಬಳಕೆ ವಸ್ತುಗಳ ಖರೀದಿಗೆ ಈಗಾಗಲೇ ಅವಕಾಶ ಕಲ್ಪಿಸಿ ಆದೇಶ ನೀಡಲಾಗಿದೆ. ಬುಧವಾರದಿಂದ ಪ್ರತಿನಿತ್ಯ ದಿನನಿತ್ಯದ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಸಾಮಾಜಿಕ ಜಾಲ ತಾಣದಲ್ಲಿ ಆಡಿಯೋವೊಂದು ವೈರಲ್ ಆಗುತ್ತಿದ್ದು, ಜನರು ಗೊಂದಲಕ್ಕೀಡಬೇಕಾಗಿಲ್ಲ.
ನಾಳೆ ಸಂಪೂರ್ಣ ಲಾಕ್ ಡೌನ್ ಎಂದು ಉಲ್ಲೇಖವಾಗಿರುವ ಹಳೆಯ ಆಡಿಯೋವೊಂದನ್ನು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಆ ಮೂಲಕ ಜನರ ಹಾದಿ ತಪ್ಪಿಸುವ ಯತ್ನ ಮಾಡಲಾಗುತ್ತಿದೆ. ಇಂತಹ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನವನ್ನು ಯಾರು ಮಾಡಬಾರದೆಂದು ನಾವು ವಿನಂತಿಯನ್ನು ಮಾಡುತ್ತಿದ್ದೇವೆ. ಈಗಾಗಲೇ ನೀಡಿರುವ ಆದೇಶದಂತೆ ಜನಸಾಮಾನ್ಯರಿಗೆ ಪ್ರತಿನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12ರ ತನಕ ಸೇವೆಗಳು ಲಭ್ಯವಿರಲಿದೆ.
ಸಾರ್ವಜನಿಕರೇ ಗಮನಿಸಿ:
ದಿನಸಿ ಅಂಗಡಿ, ತರಕಾರಿ, ಫ್ರೂಟ್ಸ್, ಹಾಲು, ಕೋಳಿ, ಮಾಂಸದ ಅಂಗಡಿ ಓಪನ್
ಒಂದು ಮನೆಯಿಂದ ಒಬ್ಬರೇ ಖರೀದಿಗೆ ಬರಲು ಅವಕಾಶ
ಮನೆ ಸಮೀಪದ ಅಂಗಡಿಯಿಂದಲೇ ಖರೀದಿಗೆ ಸೂಚನೆ
ಮಂಗಳೂರು ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಬಂದ್
ಮಧ್ಯಾಹ್ನ 12 ಗಂಟೆಯ ಬಳಿಕ ಮೆಡಿಕಲ್,ಆಸ್ಪತ್ರೆ ಹೊರತು ಪಡಿಸಿ ಎಲ್ಲವೂ ಬಂದ್
12 ಗಂಟೆಯೊಳಗೆ ಎಲ್ಲರೂ ಮನೆ ಸೇರಬೇಕು
12 ಗಂಟೆ ಬಳಿಕ ತುರ್ತು ಸೇವೆ ಹೊರತುಪಡಿಸಿ ರಸ್ತೆಗಿಳಿದ ವಾಹನಗಳು ಸೀಝ್
ದ.ಕ.ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ಆದೇಶ