ಮಂಗಳೂರು, ಫೆ 27: ಮಂಗಳೂರು ಮಹಾನಗರ ಪಾಲಿಕೆಯ 2018-2017 ನೇ ಪಾಲಿಕೆಯ ಬಜೆಟ್ ನ್ನು ಹಣಕಾಸು , ತೆರಿಗೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಫೆ.26 ರ ಸೋಮವಾರ ಸಂಜೆ ಮಂಡಿಸಿದರು. ಆದರೆ ಅವರು ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳದೆ ಮುಂದಿನ ಸಾಲಿನಲ್ಲಿ ಕುಳಿತಿರುವ ಕುರಿತು ಸಭೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಗಣೇಶ್ ಹೊಸಬೆಟ್ಟು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಕನ್ನಡ ಓದಲು ತಡವರಿಸುತ್ತಾ ಬಜೆಟ್ ಮಂಡಿಸಿದರು ಇದಕ್ಕೆ ಅಕ್ಷೇಪ ವ್ಯಕ್ತವಾದಾಗ , ನನಗೆ ಕನ್ನಡ ಸರಿಯಾಗಿ ಓದಲು ಬರುವುದಿಲ್ಲ, ನಾನು ಒಂದನೇ ತರಗತಿಯಿಂದ 10 ನೇ ತರಗತಿವರಗೆ ಸಿಬಿಎಸಿ ಶಿಕ್ಷಣ ಪಡೆದಿರುವುದರಿಂದ ಕನ್ನಡ ಕಲಿತಿಲ್ಲ . ಹೀಗಾಗಿ ಕನ್ನಡ ಓದಲು ಕಷ್ಟವಾಗುವ ಹಿನ್ನಲೆಯಲ್ಲಿ ಸಚೇತಕರ ನೆರವು ಪಡೆಯಲು ಕೆಳಗೆ ಸಾಲಿನಲ್ಲಿ ಕುಳಿತಿರುವುದಾಗಿ ಸಮಜಾಯಿಷಿ ನೀಡಿದರು. ನಂತರ ಮೇಯರ್ ಕವಿತಾ ಸನಿಲ್ ಕೂಡಾ ಬಜೆಟ್ ಮಂಡಿಸಲು ನೆರವಾದರು.