ಮಂಗಳೂರು, ಏ 2 (Daijiworld News/MSP): ಲಾಕ್ ಡೌನ್ ಆದೇಶ ಉಲ್ಲಂಘಿಸಿ ನಗರದಲ್ಲಿ ರಸ್ತೆಗಿಳಿದ ಸುಮಾರು ಏ . 2 ರ ಬುಧವಾರ 154ಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಈ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತ ಹರ್ಷ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಏ. 2 ರ ಗುರುವಾರ ಲಾಕ್ ಡೌನ್ ಉಲ್ಲಂಘಿಸಿದವರ 154ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ" ಸುರಕ್ಷಿತರಾಗಿ ಮನೆಯಲ್ಲಿಯೇ ಇರಿ, ಲಾಕ್ ಡೌನ್ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಲಾಕ್ ಡೌನ್ ಸೂಚನೆಗಳನ್ನು ಪಾಲಿಸಿ ಕೊರೊನಾ ವಿರುದ್ದ ಹೋರಡಲು ಸಹಕರಿಸಿ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್ ಸೇವೆ, ತುರ್ತು ಅಗತ್ಯ ಸೇವೆಯ ವಾಹನ ಹೊರತುಪಡಿಸಿ ಎಲ್ಲಾ ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು , ಕಾರುಗಳು ಸೇರಿ ಎಲ್ಲಾ ವಿಧದ ವಾಹನ ಸಂಚಾರದ ಮೇಲೆ ಜಿಲ್ಲಾಡಳಿತ ಏ.2 ರ ಮಧ್ಯಾಹ್ನ 12.30 ರಿಂದ ಏ. 14 ರ ಮಧ್ಯರಾತ್ರಿ ವರೆಗೆಸಂಪೂರ್ಣ ನಿಷೇಧ ಹೇರಿತ್ತು.
ಲಾಕ್ ಡೌನ್ ಆದೇಶ ಉಲ್ಲಂಘಿಸುವವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಪೊಲೀಸರು ಈ ಹಿಂದೆ ಎಚ್ಚರಿಕೆ ನೀಡಿದ್ದರು.