ಕಾಸರಗೋಡು, ಏ 02 (DaijiworldNews/SM): ಜಿಲ್ಲೆಯ ಕೆಲ ಪತ್ರಕರ್ತರಿಗೆ ಕೊರೊನ ಸೋಂಕು ಭೀತಿ ಎದುರಾಗಿದೆ. ಇದರಿಂದ ಕಾಸರಗೋಡು ಜಿಲ್ಲೆಯ ಪತ್ರಕರ್ತರು ಆತಂಕಕ್ಕೆ ಒಳಗಾಗಿದ್ದಾರೆ.
ಇಬ್ಬರು ಪತ್ರಕರ್ತರ ಸಂಬಂಧಿಕರಲ್ಲಿ ಸೋಂಕು ದೃಢಪಟ್ಟಿದ್ದು, ಇದರಿಂದ ಇಬ್ಬರು ಪತ್ರಕರ್ತರು, ಇವರ ಜೊತೆ ಸಂಪರ್ಕ ಹೊಂದಿರುವ ಇತರ ಪತ್ರಕರ್ತರು ನಿಗಾ ವಹಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ಕಾಸರಗೋಡು ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ತೀವ್ರ ಆತಂಕ ಎದುರಾಗಿದೆ. ಇದರ ನಡುವೆ ಮತ್ತೆ ಪತ್ರಕರ್ತರ ಕುಟುಂಬಸ್ಥರಲ್ಲಿ ಸೋಂಕು ಕಂಡುಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.