ಬೆಳ್ತಂಗಡಿ, ಏ 02 (DaijiworldNews/SM): ಅನಗತ್ಯವಾಗಿ ವಾಹನಗಳ ಓಡಾಟ ನಡೆಸುತ್ತಿರುವ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿರುವ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರದಂದು ಸುಮಾರು 14 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಸರಕಾರದ ಆದೇಶದಂತೆ ಮುಂಜಾಗ್ರತ ಕ್ರಮವಾಗಿ ಲಾಕ್ ಡೌನ್ ಬಿಗಿಗೊಳಿಸಲಾಗಿದೆ. ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಸುತ್ತಾಡುತ್ತಿಡ್ಡ ವಾಹನಗಳನ್ನು ಗುರುವಾರ ಮಡಂತ್ಯಾರು ಪೇಟೆಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ಪುಂಜಾಲಕಟ್ಟೆ ಎಸೈ ಸೌಮ್ಯ ಅವರ ತಂಡ ಮಡಂತ್ಯಾರು, ವಾಮದಪದಪು ಹಾಗೂ ಪುಂಜಾಲಕಟ್ಟೆ ಪರಿಸರದಲ್ಲಿ 12 ದ್ವಿಚಕ್ರ ವಾಹನ, ಒಂದು ಆಟೋ ಹಾಗೂ ಒಂದು ಪಿಕಪ್ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.