ಕಾಸರಗೋಡು, ಎ.03 (Daijiworld News/MB) : ಕೊರೊನಾ ಲಾಕ್ಡೌನ್ ಘೋಷಣೆಯಾದ ಕೆಲವು ದಿನಗಳ ಬಳಿಕ ಮನೆಗೆ ಬಂದ ಪತಿಗೆ ಪತ್ನಿ ಬಾಗಿಲು ತೆರೆಯದ ಮನೆಯ ಹೊರಗಡೆಯೇ ನಿಲ್ಲಿಸಿದ ಘಟನೆ ಮಧೂರು ಗ್ರಾಮ ಪಂಚಾಯತ್ನ ಸಿರಿಬಾಗಿಲಿನಲ್ಲಿ ನಡೆದಿದೆ.
ಈ ಕುಟುಂಬ ಮಧೂರು ಗ್ರಾಮ ಪಂಚಾಯತ್ನ ಸಿರಿಬಾಗಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಪತಿ ಕೋಯಿಕ್ಕೋಡ್ನ ಹೊಟೇಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ರಾತ್ರಿ ಮನೆಗೆ ಹಿಂದಿರುಗಿ ಬಂದಿದ್ದು ಕೊರೊನಾ ಸೋಂಕಿನ ಭೀತಿಯಿಂದಾಗಿ ಪತ್ನಿ ಅವರನ್ನು ಮನೆಯೊಳಗೆ ಸೇರಿಸಿಲ್ಲ.
ಈ ವಿಷಯ ತಿಳಿದ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಆತನನ್ನು ಮಾಯಿಪ್ಪಾಡಿ ಡಯಟ್ನಲ್ಲಿರುವ ಕೊರೊನಾ ಶಂಕಿತರ ನಿಗಾ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಈ ವ್ಯಕ್ತಿಗೆ ಮಧ್ಯಾಹ್ನ, ರಾತ್ರಿ ಕಮ್ಯೂನಿಟಿ ಕಿಚನ್ನಿಂದ ಆಹಾರ ದೊರಕುತ್ತಿದೆ. ಬೆಳಿಗ್ಗೆ ಸಂಜೆ ಡಯಟ್ ಅಧ್ಯಾಪಕ ಸಂತೋಷ್ ಉಪಹಾರ ಒದಗಿಸುತ್ತಿದ್ದಾರೆ. ಆದರೆ ಈ ವ್ಯಕ್ತಿ ಆಹಾರ ತಲುಪಿಸುವವರಲ್ಲಿ ತನ್ನ ಪತ್ನಿ ಮಕ್ಕಳಿಗೆ ಆಹಾರ ಸಿಗುತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.