ಮಂಗಳೂರು, ಎ.03 (DaijiworldNews/PY) : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್ ನ ಮೇಲ್ಮನವಿ ವ್ಯಾಪ್ತಿಯಲ್ಲಿ ವಿಶೇಷ ಅರ್ಜಿ ಸಲ್ಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಆನಂದ್ ಸಂಜಯ್ ನುಲಿ ಹೇಳಿದ್ದಾರೆ. ಅಲ್ಲದೇ, ಕರ್ನಾಟಕದೊಂದಿಗೆ ಕೇರಳದ ಗಡಿಯನ್ನು ತೆರೆಯುವಂತೆ ಕೇಂದ್ರ ಸರ್ಕಾರವನ್ನು ಕೋರಿ ಕೇರಳ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಮಿಥುನ್ ರೈ ಅವರು ಪ್ರಶ್ನಿಸಿದ್ದಾರೆ.
ಕೇರಳದಿಂದ ಮಂಗಳೂರಿಗೆ ಮತ್ತು ಬಳಿಕ ಕರ್ನಾಟಕಕ್ಕೆ ಪ್ರಯಾಣಿಸುವ ಜನರ ಮೂಲಕ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಕರ್ನಾಟಕ ಹಾಗೂ ಕೇರಳ ರಾಜ್ಯದ ಜನರಿಗೆ ತಿಳಿದಿದೆ. ಸ್ವಯಂಚಾಲಿತವಾಗಿ ಗಡಿಯನ್ನು ತೆರೆದರೆ ಕರ್ನಾಟಕದ ಜನತೆಗೆ ಗಂಭೀರವಾಗಿ ಆರೋಗ್ಯದ ಸಮಸ್ಯೆಯನ್ನುಂಟು ಮಾಡುತ್ತದೆ.
ಕೇರಳವು ಸಾಕಷ್ಟು ಅಭಿವೃದ್ದಿ ಹೊಂದಿದ ರಾಜ್ಯವಾಗಿದೆ. ಅಲ್ಲದೇ ಮಂಗಳೂರಿಗೆ ಪ್ರಯಾಣಿಸುವ ಬದಲು ಅಲ್ಲಿನ ರೋಗಿಗಳನ್ನು ನಿಭಾಯಿಸುವಂತಂಹ ಹಾಗೂ ಚಿಕಿತ್ಸೆ ನೀಡಲು ಅಗತ್ಯವಾದ ಎಲ್ಲಾ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದಾರೆ ಎಂಬ ನಂಬಿಕೆ ನನಗೆ ಇದೆ ಎಂದು ಮಿಥುನ್ ರೈ ಹೇಳಿದ್ದಾರೆ.
ಆದ್ದರಿಂದ ಕೇರಳದ ಗಡಿ ಮುಚ್ಚಿಯೇ ಇರಬೇಕಾಗುತ್ತದೆ. ನಾವು ಕರ್ನಾಟಕದ ಜನರನ್ನು ತೊಂದರೆಗೆ ಒಳಪಡಿಸುವುದಿಲ್ಲ. ಪ್ರಸ್ತುತ ಸ್ಥಿತಿಗತಿ ಬಗ್ಗೆ ಪೂರ್ಣ ಅರಿವು ಇರುವ ಕಾರಣದಿಂದಾಗಿ ನಾನು ಕೇರಳಕ್ಕೆ ಕರ್ನಾಟಕ ಗಡಿ ತೆರೆಯುವುದರ ಪರವಾಗಿ ನಿಲ್ಲದೇ ವಿರುದ್ಧವಾಗಿ ನಿಲ್ಲುತ್ತೇನೆ. ಹಾಗೆಯೇ ನಾನು ಎಂದಿನಂತೆ ಅನ್ಯಾಯದ ವಿರುದ್ಧ ನಿಂತು ಮಂಗಳೂರಿನ ಹಾಗೂ ಕರ್ನಾಟಕದ ಜನರನ್ನು ಉಳಿಸಲು ಹೋರಾಡುತ್ತೇನೆ ಎಂದು ರೈ ತಿಳಿಸಿದ್ದಾರೆ.