ಮಂಗಳೂರು, ಎ.03 (DaijiworldNews/PY) : ದೇರಳಕಟ್ಟೆ ಪಾನೀರು ಚರ್ಚ್ಗೆ ನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸುವ ಲಾಕರ್ ಮುರಿದಿರುವುದಲ್ಲದೆ, 10 ಕ್ಕೂ ಅಧಿಕ ಖಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದಾರೆ .
ಕೊಣಾಜೆ ಠಾಣಾ ವ್ಯಾಪ್ತಿಯ ನಿತ್ಯಾನಂದನಗರ ಎಂಎಸ್ಐಎಲ್ ವೈನ್ಸ್ಗೆ ನುಗ್ಗಿದ ಕಳ್ಳರು ಬಳಿಕ ಪಾನೀರು ಚರ್ಚಿನಲ್ಲಿಯೂ ಕಳವು ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಪಾನೀರು ಅವರ್ ಲೇಡಿ ಆಫ್ ಮರ್ಸಿ ಚರ್ಚಿನ ಎದುರು ಭಾಗದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಪರಮ ಪ್ರಸಾದ ಇರಿಸಿದ ಲಾಕರ್ ಮುರಿದಿದ್ದಾರೆ. ಅಲ್ಲದೆ ಚರ್ಚ್ ಆವರಣದಲ್ಲಿ ಇರಿಸಲಾಗಿದ್ದ ಹತ್ತಕ್ಕೂ ಅಧಿಕ ಕಾಣಿಕೆ ಡಬ್ಬಿಗಳನ್ನು ಒಡೆದಿರುವ ಕಳ್ಳರು ಅದರಲ್ಲಿದ್ದಂತಹ ಹಣವನ್ನು ಲೂಟಿಗೈದಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.