ಕಾಸರಗೋಡು, ಫೆ 27: ತಳಂಗರೆ ಖಾಸಿಲೈನ್ ನ ಕೆ.ಎ. ಬಶೀರ್ (22) ರನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಸಜೆ ಮತ್ತು ದಂಡ ವಿಧಿಸಿ ತೀರ್ಫು ನೀಡಿದೆ. ಪ್ರಥಮ ಆರೋಪಿ ತಳಂಗರೆ ಖಾಸಿ ಲೈನ್ ನ ಪಿ. ಎ ರಿಯಾಜ್ ( 28 ), ಮೂರನೇ ಆರೋಪಿ ತಳಂಗರೆ ಯ ಜಾಶೀರ್ ( 30) ಗೆ 11 ವರ್ಷ ಸಜೆ , ಎರಡೂವರೆ ಲಕ್ಷ ರೂ . ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಒಂದೂವರೆ ವರ್ಷ ಅಧಿಕ ಶಿಕ್ಷೆ ಅನುಭವಿಸಬೇಕು. ಎರಡನೇ ಆರೋಪಿ ಪಿ .ಎ ಬಾದುಷಾ ( 22) ನಿಗೆ ವಿವಿಧ ವಿಭಾಗಗಳಲ್ಲಿ ಏಳು ವರ್ಷ ಸಜೆ , ಎರಡೂ ವರೆ ವರ್ಷ ದಂಡ ವಿಧಿಸಿ ತೀರ್ಫು ನೀಡಲಾಗಿದೆ.
ಕೊಲೆಗೀಡಾದ ಬಶೀರ್ , ಆರೋಪಿಗಳಾದ ರಿಯಾಜ್ , ಬಾದುಷಾ , ಜಾಶೀರ್
2012 ರ ಫೆಬ್ರವರಿ 23ರಂದು ಘಟನೆ ನಡೆದಿತ್ತು .ತಳಂಗರೆಯ ಮೈದಾನ ವೊಂದರಲ್ಲಿ ಕ್ಷುಲ್ಲಕ ಕಾರಣವೊಂದಕ್ಕೆ ಬಶೀರ್ ನನ್ನು ಇರಿದು ಕೊಲೆ ಗೈಯ್ಯಲಾಗಿತ್ತು. 2012 ಫೆಬ್ರವರಿ 23ರಂದು ರಾತ್ರಿ ತಳಂಗರೆ ಮಾಲಿಕ್ದೀನಾರ್ ಮಸೀದಿ ಬಳಿಯ ಮೈದಾನದಲ್ಲಿ ಬಶೀರ್ರನ್ನು ಬಿಯರ್ ಬಾಟ್ಲಿಯಿಂದ ಮತ್ತು ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಲಾಗಿತ್ತು. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ 2012 ಎಪ್ರಿಲ್ ೫ರಂದು ಬೆಳಿಗ್ಗೆ ಸಾವನ್ನಪ್ಪಿದ್ದರು
ನ್ಯಾಯಾಧೀಶರಾದ ಸಾನು ಎಸ್. ಪಣಿಕ್ಕರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.