ಸುಳ್ಯ, ಏ 03 (DaijiworldNews/SM): ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮೂರೂರು ಎಂಬಲ್ಲಿ ಚೆಕ್ ಪಾಯಿಂಟ್ ನಲ್ಲಿ ನಡೆದಿದೆ. ಪರಪೆ ನಿವಾಸಿ ಸಿನಾನ್ ಪ್ರಕರಣದ ಆರೋಪಿಯಾಗಿದ್ದಾನೆ.
ಮೂರೂರು ಚೆಕ್ ಪಾಯಿಂಟ್ ನಲ್ಲಿ ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಈ ವೇಳೆ ಆರೋಪಿ ಕೇರಳದಿಂದ ಕರ್ನಾಟಕಕ್ಕೆ ಬರಲು ಯತ್ನಿಸುತ್ತಿದ್ದ. ಆದರೆ, ಅವನಿಗೆ ಕೇರಳದಿಂದ ರಾಜ್ಯಕ್ಕೆ ಬರಲು ಪೊಲೀಸರು ಅವಕಾಶ ನೀಡಲಿಲ್ಲ. ಆದುದರಿಂದ,ಆಕ್ರೋಶಗೊಂಡ ಆತ ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಕೋರೋಣ ನಿಮಿತ್ತ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಭಾಸ್ಕರ್ ಹಾಗೂ ರಾಮ ನಾಯ್ಕ್ ಅವರು ಗಸ್ತು ತಿರುಗುತಿದ್ದಾಗ ಪರಪೆ ನಿವಾಸಿ ಸಿನಾನ್ ಕರ್ನಾಟಕ ಭಾಗಕ್ಕೆ ಬರಲು ಯತ್ನಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಇದರಿಂದ ಪೊಲೀಸರಿಗೆ ಗಾಯವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.