ಕಾಸರಗೋಡು, ಏ 4 (Daijiworld News/MSP):ಕಾಸರಗೋಡಿನಲ್ಲಿ ಕೊರೊನ ಸೋಂಕಿತ 135 ಮಂದಿಯಲ್ಲಿ ಮೂವರು ಗರ್ಭಿಣಿಯರು , 15 ವರ್ಷದ ವರ್ಷದ ಐವರು ಮಕ್ಕಳು ಒಳಗೊಂಡಿದ್ದಾರೆ . ಮೂವರು ಗರ್ಭಿಣಿಯರಲ್ಲಿ ಇಬ್ಬರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆ , ಓರ್ವ ಕಾಞ0 ಗಾಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಗೆ ಸಂಪರ್ಕದ ಮೂಲಕ ಸೋಂಕು ಹರಡಿದೆ. ಸೋಂಕಿತರಲ್ಲಿ ಇಬ್ಬರು ಎರಡು ವರ್ಷದ ಮಕ್ಕಳಾಗಿದ್ದಾರೆ . ಇನ್ನಿಬ್ಬರು 11 , ಇನ್ನೋರ್ವ ಹದಿನೈದು ವರ್ಷದ ದವನಾಗಿದ್ದಾನೆ . ಈಗ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸುಧಾರಿಸುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಚೆಮ್ನಾಡ್ , ಮಧೂರು , ಮೊಗ್ರಾಲ್ ಪುತ್ತೂರು , ಚೆಂಗಳ , ಪಳ್ಳಿಕೆರೆ , ಉದುಮ, ಗ್ರಾಮ ಪಂಚಾಯತ್ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಅತ್ಯಧಿಕ ಸೋಂಕಿತರಿದ್ದಾರೆ . ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಜಿಲ್ಲೆಯಲ್ಲಿ 10, 256 ಮಂದಿ ನಿಗಾದಲ್ಲಿದ್ದು , 184 ಮಂದಿ ಆಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ . ಇದುವರೆಗೆ 1325 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ