ಕಾರ್ಕಳ, ಏ 4 (Daijiworld News/MSP): ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ ಲಾಕ್ ಡೌನ್ನಿಂದಾಗಿ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧಿಸಿದ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ತಂಬಾಕು ಪ್ಯಾಕೇಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡುಬರುತ್ತಿದೆ.
ತಂಬಾಕು ಪ್ಯಾಕೇಟ್ಗಳ ಮಾರಾಟಕ್ಕೆ ಈ ಹಿಂದೆಯೇ ನಿಷೇಧವಿತ್ತು. ಹೀಗಿದ್ದರೂ ರಂಗೋಲಿಯಡಿಯಲ್ಲಿ ನುಗ್ಗುವ ಜಾಯಾಮಾನ ಹೊಂದಿರುವ ತಂಬಾಕು ಪ್ಯಾಕೇಟ್ ಮಾರಾಟಗಾರರು ಇಲಾಖಾಧಿಕಾರಿಗಳಿಗೆ ಮಂಕುಬೂದಿ ಎರಚಿ ಲಾಭಂಶವನ್ನು ದ್ವಿಗುಣಗೊಳಿಸಿ ಮಾರಾಟ ಮಾಡುತ್ತಿದ್ದರು.
ಕಳೆದ ೧೦ ದಿನಗಳಂದ ಮದ್ಯಮಾರಾಟ ಇಲ್ಲದೇ ಹೋದುದರಿಂದ ಮದ್ಯವ್ಯಸನಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದು, ತಂಬಾಕು ಸೇವನೆಗೆ ತುತ್ತಾಗಿದ್ದಾರೆ. ಭಾರೀ ಬೇಡಿಕೆ ಎದುರಾಗಿರುವ ಹಿನ್ನಲ್ಲೆಯಲ್ಲಿ ನಿಗದಿತ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿನ ತಂಬಾಕು ಪ್ಯಾಕೇಟ್ ಮಾರಾಟ ಮಾಡುವ ದಂಧೆಯು ನಿರತವಾಗಿದ್ದರೂ, ಇಲಾಖಾಧಿಕಾರಿಗಳು ಮೌನಕ್ಕೆ ಶರಣಾಗಿರುವ ಆರೋಪವು ಕೇಳಿಬರುತ್ತಿದೆ.