ಮಂಗಳೂರು, ಏ 4 (Daijiworld News/MSP): ದಾಯ್ಜಿವರ್ಲ್ಡ್ ಮೀಡಿಯಾ ಸಮೂಹ ಸಂಸ್ಥೆ ಪ್ರಾರಂಭಿಸಿದ "ನಿಮ್ಮೊಂದಿಗೆ ನಾವಿದ್ದೇವೆ " ವಿಶೇಷ ಅಭಿಯಾನಕ್ಕೆ ಯುವವಾಹಿನಿ (ರಿ.)ಕೊಲ್ಯ ಘಟಕ ಕೈ ಜೋಡಿಸಿದೆ.
ದಾಯ್ಜಿವರ್ಲ್ಡ್ ವಾಹಿನಿಯಯೂ ನೇರ ಪ್ರಸಾರ ಮುಖಾಂತರ ಕೊರೊನ ಮಹಾಮಾರಿಯಿಂದ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮದಿಂದ ಜನಜೀವನ ಸ್ಥಗಿತಗೊಂಡು ಜೀವನ ಸಾಗಿಸಲು ಸಂಕಷ್ಟಕ್ಕೊಳಗಾಗಿ ದೈನಂದಿನ ಜೀವನಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಆರ್ಥಿಕ ಸಂಪಾದನೆಯ ಕೊರತೆಯಿಂದ ಕೊಂಡುಕೊಳ್ಳಲಾಗದ ಕುಟುಂಬದ ಅಳಲಿಗೆ ಸ್ಪಂದಿಸಲು ನೇರ ಪ್ರಸಾರದ ಮುಖಾಂತರ ಲೆಕ್ಕಕ್ಕೂ ಮೀರಿದ ಬಡ ಕುಟುಂಬಗಳ ಅಹವಾಲನ್ನು ಸ್ವೀಕರಿಸಿತ್ತು.
ಕೊಲ್ಯ ಘಟಕದ ಪರಿಸರದ ಅಡ್ಕ ಹಾಗೂ ಕುಂಪಲ ದಿಂದಲೂ ಬಡಕುಟುಂಬಗಳು ಸಹಾಯವನ್ನು ಕೇಳಿ ವಾಹಿನಿಯ ನೇರಪ್ರಸಾರದಲ್ಲಿ ತಮ್ಮ ಕಷ್ಟವನ್ನು ತೋಡಿಕೊಂಡಾಗ ತಕ್ಷಣ ದಾಯ್ಜಿವರ್ಲ್ಡ್ ನ ಸಂಸ್ಥೆಯನ್ನು ಸಂಪರ್ಕಿಸಿ ನೋವು ತೋಡಿಕೊಂಡ ಬಡಕುಟುಂಬ ಗಳ ವಿವರವನ್ನು ಪಡೆದು ಕುಟುಂಬಗಳ ಪರಿಸ್ಥಿತಿಯನ್ನು ಪರಿಶೀಲಿಸಿ ಅವರ ನೋವಿಗೆ ತಕ್ಷಣ ಯುವವಾಹಿನಿ ಕೊಲ್ಯ ಘಟಕ ಸ್ಪಂದಿಸಿದೆ.
ಪರಿಶೀಲಿಸಿದ ಕುಟುಂಬಗಳಲ್ಲಿ ಕುಂಪಲ ಶಾಲಾ ಬಳಿಯ ನಿವಾಸಿ ಶ್ರೀಮತಿ ಗುಲಾಬಿ,ಕುಂಪಲ ಆಶ್ರಯ ಕಾಲನಿಯ ನಿವಾಸಿಗಳಾದ ಶ್ರೀಮತಿ ಪುಷ್ಪ ಹಾಗೂ ಶ್ರೀ ಮತಿ ಪ್ರತಿಭಾ ಎಂಬುವವರ ಈ ಮೂರು ಮನೆಗಳಿಗೆ ಯುವವಾಹಿನಿ ಕೊಲ್ಯ ಘತಕ ಏ.4ರ ಶನಿವಾರ ಬೆಳಿಗ್ಗೆ ಭೇಟಿ ನೀಡಿ ಆ ಕುಟುಂಬಗಳಿಗೆ ಬೇಕಾಗುವ ಅಗತ್ಯ ದಿನಸಿ ಸಾಮಾಗ್ರಿಗಳ ಕಿಟ್ ನ್ನು ಘಟಕದ ಅಧ್ಯಕ್ಷರು ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.
"ನಿಮ್ಮೊಂದಿಗೆ ನಾವಿದ್ದೇವೆ" ಇಂತಹ ವಿಶೇಷವಾದ ಅಭಿಯಾನಕ್ಕೆ ನಾವೂ ಕೈಜೋಡಿಸಿಕೊಂಡು ನಮ್ಮಿಂದಾದ ಸೇವೆಯನ್ನು ಮಾಡಲು ಅವಕಾಶ ಮಾಡಿ ಕೊಟ್ಟ ದಾಯ್ಜಿವರ್ಲ್ಡ್ ವಾಹಿನಿಯ ತಂಡಕ್ಕೆ ನಾವು ಸದಾ ಅಬಾರಿ" ಯುವವಾಹಿನಿ (ರಿ.) ಕೊಲ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಕುಸುಮಾಕರ ಕುಂಪಲ ತಿಳಿಸಿದ್ದಾರೆ.