ಸುಳ್ಯ, ಏ 4 (Daijiworld News/MSP): ಲಾಕ್ ಡೌನ್ ಹಿನ್ನಲೆ ಮದ್ಯ ಸಿಗದೆ ತಾನೇ ಗೇರು ಹಣ್ಣಿನ ಸಾರಾಯಿ ತಯಾರಿಕೆಗೆ ಮುಂದಾದ ವ್ಯಕ್ತಿಯೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ಳಾರೆ ಕಲ್ಲೋಣಿಯ ಜನಾರ್ದನ ತಮ್ಮ ಮನೆಯಲ್ಲಿ ಗೇರುಹಣ್ಣಿನ ಕಳ್ಳಭಟ್ಟಿ ತಯಾರಿಸಲು ಮುಂದಾದ ವ್ಯಕ್ತಿ. ಕಳ್ಳಭಟ್ಟಿ ಅಡ್ಡೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆ 115 ಲೀ ಗೇರು ಹುಳಿ, ಒಂದುವರೆ ಲೀ. ಸಾರಾಯು ಹಾಗೂ ತಯಾರಿಗೆ ಸಂಬಂಧಿಸಿದ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲ್ಲೋಣಿಯ ಜನಾರ್ದನ ತಮ್ಮ ಮನೆಯ ಬಳಿ ಗೇರು ಹಣ್ಣಿನ ಸಾರಾಯಿ ತಯಾರಿಸುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸುಳ್ಯದ ಅಬಕಾರಿ ಇಲಾಖೆಯ ಉಪ ನಿರೀಕ್ಷಕಿ ರಾಧಾ ಎಸ್.ಪಿ. ನೇತೃತ್ವದ ತಂಡ ಮದ್ಯ ವಶಪಡಿಸಿ ಈತನನ್ನು ಬಂಧಿಸಿದರು. ಈತನ ವಿರುದ್ದ ಪ್ರಕರಣ ದಾಖಲಾಗಿದೆ.