ಕಾಸರಗೋಡು, ಎ.05 (Daijiworld News/MB) : ಕಣ್ಣೂರು ಸೆಂಟ್ರಲ್ ಜೈಲಿನ ಕೊರೊನಾ ನಿಗಾ ಕೇಂದ್ರದಿಂದ ಪರಾರಿಯಾಗಿದ್ದ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಾಸರಗೋಡಿನ ಹಳೆ ಬಸ್ ನಿಲ್ದಾಣ ಪರಿಸರದಲ್ಲಿರುವ ಕೆನರಾ ಬ್ಯಾಂಕ್ನಿಂದ ಕಳವು ಮಾಡಿದ ಪ್ರಕರಣದ ಆರೋಪಿ, ಉತ್ತರ ಪ್ರದೇಶ ಅಮೀರ್ಪುರ್ ನಿವಾಸಿ ಅಜಯ್ ಬಾಬು (21).
ಆತ ಚೆರುಕುನ್ನು ತಾವತ್ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಕಣ್ಣಪುರಂ ಪೊಲೀಸರು ಆಗಮಿಸಿದಾಗ ಆತ ಪರಾರಿಯಾಗಲು ಯತ್ನಿಸಿದ್ದು ಪೊಲೀಸರು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ.
ಮಾರ್ಚ್ 25 ರಂದು ಕಾಸರಗೋಡಿನಿಂದ ಅಜಯ್ ಬಾಬುನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕೊರೊನಾ ವೈರಸ್ ಸೋಂಕಿತ ವಲಯವಾಗಿರುವ ಕಾಸರಗೋಡಿನಿಂದ ಕರೆತರಲಾದ ಕಾರಣದಿಂದಾಗಿ ಕೈದಿಯನ್ನು ಜೈಲಿನ ನಿಗಾ ವಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಆತ ಕೇಂದ್ರದ ವೆಂಟಿಲೇಷನ್ ಮುರಿದು ಪರಾರಿಯಾಗಿದ್ದನು.