ಉಡುಪಿ, ಏ 05 (DaijiworldNews/SM): ಈ ದೇಶದಲ್ಲಿ ಒಂದು ರೀತಿಯ ಕೊರೊನಾ ಜಿಹಾದ್ ನಡೆಯುತ್ತಿದೆ. ಬೆಳಗಾಂ ನಲ್ಲಿ ಕೊರೊನಾ ಪಾಸಿಟಿವ್ ಸೋಂಕಿತ ವೈದ್ಯರನ್ನು ತಬ್ಬಿಕೊಳ್ಳುತ್ತಾನೆ ಎಂದರೆ ದೇಶದಲ್ಲಿ ಯಾವ ರೀತಿಯ ಜಿಹಾದ್ ಮನಸ್ಥಿತಿ ಇದೆ ಎಂದು ತಿಳಿದುಕೊಳ್ಳಬೇಕು. ಭಯೋತ್ಪಾದನೆಯ ಮುಂದುವರೆದ ಭಾಗ ಇದು ಎಂದು ಸಂಸದೆ ಶೋಭಾ ಕರಂದ್ಲಾಕೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗಾಂ ನ ಆ ಕೊರೊನಾ ಸೋಂಕಿತನನ್ನು ಕ್ವಾರಂಟೈನ್ ನಲ್ಲಿ ಇರಿಸಬೇಕು. ಕ್ವಾರಂಟೈನ್ ಮುಗಿದ ಕೂಡಲೇ ಆತನನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಕೊರೊನಾ ವಿಷಯದಲ್ಲಿ ರಾಜಕೀಯ ಮಾಡಿತಿದ್ದಾರೆ ಎಂಬ ಯು.ಟಿ. ಖಾದರ್ ಮಾತಿಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಂಜೆ, ರಾಜಕೀಯ ಮಾಡುತ್ತಿರುವುದು ತಬ್ಲಿಕ್ ಸಂಸ್ಥೆಗೆ ಹೋದವರು. ಇವತ್ತಿಗೂ ಕೂಡಾ ಇವರು ಡಾಕ್ಟರ್ ಬಳಿಗೆ ಹೋಗಿಲ್ಲ. ನಾನು ರಾಜಕೀಯ ಮಾಡುತಿಲ್ಲ. ನಾನು ನಿಮ್ಮ ದುರ್ಬುದ್ದಿಯನ್ನು ಜನರಿಗೆ ತೋರಿಸುವ ಕೆಲಸವನ್ನು ಮಾಡುತಿದ್ದೇನೆ. ಯಾಕೆ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರು ಎಂದು ಹೇಳಲಿ ಎಂದರು.