ಕಾಸರಗೋಡು, ಏ 05 (DaijiworldNews/SM): ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಆದಿತ್ಯವಾರ ಏಳು ವರ್ಷದ ಬಾಲಕನಲ್ಲಿ ಕೊರೊನ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕದಿಂದ ಬಾಲಕನಿಗೆ ಸೋಂಕು ತಗಲಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಆದಿತ್ಯವಾರ ಒಂದು ಪ್ರಕರಣ ಮಾತ್ರ ದೃಢಪಟ್ಟಿದೆ. ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಆದಿತ್ಯವಾರ ಕೇವಲ ಒಂದು ಪ್ರಕರಣ ದಾಖಲಾಗುವುದರೊಂದಿಗೆ ಅಲ್ಪ ನಿರಾಳ ಉಂಟಾಗಿದೆ. ನಗರದ ನೆಲ್ಲಿಕುಂಜೆಯ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದು, ಬಾಲಕನ ತಂದೆ ಮತ್ತು ತಾಯಿಗೆ ಸೋಂಕು ತಗಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕೇರಳದಲ್ಲಿ ಒಟ್ಟು ಎಂಟು ಮಂದಿಯಲ್ಲಿ ಆದಿತ್ಯವಾರ ಸೋಂಕು ಪತ್ತೆಯಾಗಿದೆ. ಕೋಜಿಕ್ಕೋಡ್ ಐದು, ಪತ್ತನಂತ್ತಿಟ್ಟ, ಕಣ್ಣೂರು ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡು ಬಂದಿದೆ.