ಉಜಿರೆ, ಎ.06 (DaijiworldNews/MSP): ಅಕ್ರಮವಾಗಿ ಸೇಂದಿ ಸಾಗಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದ ಘಟನೆ ಭಾನುವಾರ ಉಜಿರೆಯಲ್ಲಿ ನಡೆದಿದೆ.
ಆರೋಪಿಗಳನ್ನು ತಂಬಿ ಕೆ.ವಿ ಹಾಗೂ ಶಿವಣ್ಣ ಗೌಡ ಎಂದು ಗುರುತಿಸಿಸಲಾಗಿದೆ. ಬೆಳ್ತಂಗಡಿ ಅಬಕಾರಿ ತಂಡವು ಗಸ್ತು ತಿರುಗುವ ವೇಳೆ ಮಾರುತಿ ಓಮ್ನಿಯಲ್ಲಿ 35 ಲೀಟರ್ ಸಾಮರ್ಥ್ಯದ 3 ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಒಟ್ಟು 90 ಲೀಟರ್ ಸೇಂದಿಯನ್ನು ಸಾಗಣೆ ಮಾಡುತ್ತಿದ್ದ ವೇಳೆ ಬಂಧನ ಮಾಡಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿದ್ದ ಮಾರುತಿ ಓಮ್ನಿ ವಶಕ್ಕೆ ಪಡೆಯಲಾಗಿದೆ.
ಜತೆಗೆ ₹1.17 ಲಕ್ಷ ಮೌಲ್ಯಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್, ಸಿಬ್ಬಂದಿ ಸೈಯ್ಯದ್ ಶಬೀರ್, ಬೋಜ ಕೆ, ಅಬ್ದುಲ್ ಹಮೀದ್, ಶಿವಶಂಕ್ರಪ್ಪ, ರವಿಚಂದ್ರ ಬೂದಿಹಾಳ ಹಾಗೂ ವಾಹನ ಚಾಲಕ ನವೀನ್ ಕುಮಾರ್ ಪಿ. ಕಾರ್ಯಾಚರಣೆಯಲ್ಲಿ ಇದ್ದರು.