ಮಂಗಳೂರು,ಏ 06 (DaijiworldNews/MSP): ದ.ಕ. ಜಿಲ್ಲೆಯಲ್ಲಿ ಕೊರೊನಾ ಭೀತಿ ನಡುವೆಯೂ ಇದೀಗ ನಾಲ್ವರು ಕೊರೊನಾ ಪೀಡಿತರು ಗುಣಮುಖರಾಗಿದ್ದು ಏ. 6 ರ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯ ಜನತೆಯ ಮಟ್ಟಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು ಸೋಂಕಿತರ 12 ಮಂದಿಯ ಪೈಕಿ ನಾಲ್ವರು ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಉಳಿದ 8 ಮಂದಿಯ ಚಿಕಿತ್ಸೆ ಮುಂದುವರಿದಿದ್ದು , ಇವರು ಕೂಡಾ ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ತಂಡ ತಿಳಿಸಿದೆ.
ಸೋಂಕಿತರ ಪೈಕಿ ಒರ್ವ ಭಟ್ಕಳ,ಮೂರು ಮಂದಿ ಕಾಸರಗೋಡು ನಿವಾಸಿಗಳಾಗಿದ್ದು, ಡಿಸ್ಚಾರ್ಜ್ ವೇಳೆ ಕೈಗೆ ಸೀಲ್ ಹಾಕಿ28 ದಿನ ಕಡ್ಡಾಯ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ, ಇವರೆಲ್ಲಾರಿಗೂ ಸೂಚನೆ ನೀಡಲಾಗಿದೆ.