ಕಾರ್ಕಳ, ಏ 07(Daijiworld News/MSP): ಕಸಬ ಗ್ರಾಮದ ಸಾಲ್ಮರ್ ವಿನ್ಯಾಸ್ ಟ್ರೇಡರ್ಸ್ ಅಂಗಡಿ ಬಳಿ ಕಾರ್ಕಳ ಬಸ್ಸು ನಿಲ್ಧಾಣದಿಂದ ಜೋಡುರಸ್ತೆ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹಾದು ಹೋಗುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಗಳ ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಕಾರೊಂದು ಹಾದುಹೋಗಿರುವ ಕುರಿತು ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.
ನಗರ ಠಾಣಾ ಸಿಬ್ಬಂದಿಯವರಾದ ಮೂರ್ತಿ ಹಾಗೂ ಗಪೂರ್ ಜಂಟಿಯಾಗಿ ವಾಹನ ತಪಾಸಣೆ ಮಾಡುತ್ತಿದ್ದರು. ಅದೇ ಸಮಯದಲ್ಲಿ ಜೋಡುರಸ್ತೆ ಕಡೆಯಿಂದ ಕಾರ್ಕಳ ಬಸ್ಸು ನಿಲ್ಧಾಣ ಕಡೆಗೆ ಬರುತ್ತಿದ್ದ ಒಂದು ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದನು. ಇದನ್ನು ಕಂಡ ಪೊಲೀಸ್ ಸಿಬ್ಬಂದಿಯರು ಕಾರಿನ ಚಾಲಕನಿಗೆ ದೂರದಲ್ಲಿಯೇ ಕೈ ಸನ್ನೆ ಮಾಡಿ ಕಾರನ್ನು ಬದಿಗೆ ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೂ ಕೂಡ ಕಾರು ಚಾಲಕನು ಸೂಚನೆಯನ್ನು ಪಾಲಿಸದೇ ಅದೇ ವೇಗದಲ್ಲಿ ಪೊಲೀಸ್ ಸಿಬ್ಬಂದಿಯವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಾಗುವಂತೆ ಚಲಾಯಿಸಿಕೊಂಡು ಕಾರ್ಕಳ ಪೇಟೆ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿರುದಾಗಿ ತಿಳಿದುಬಂದಿದೆ.
ಕೆಎ 20 ಎಂಬಿ 1286 ನೊಂದಾವಣೆ ಸಂಖ್ಯೆಯ ಕಾರು ಅದಾಗಿರುತ್ತದೆ. ಈ ಕುರಿತು ನಗರ ಠಾಣೆಯಲ್ಲಿ ಕೇಸುದಾಖಲಾಗಿರುತ್ತದೆ.