ಕಾಸರಗೋಡು, ಏ 07(Daijiworld News/MSP): ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಬಿಗುಗೊಳಿಸಲಾಗಿದ್ದು , ಜನರು ಮನೆಯಿಂದ ಹೊರಬರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.
ಮೊಗ್ರಾಲ್ ಪುತ್ತೂರು, ಚೆಮ್ನಾಡ್ , ಮಧೂರು , ಉದುಮ , ಪಳ್ಳಿಕೆರೆ , ಚೆಂಗಳ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಬಾಧಿತ ವಲಯ ಎಂದು ಘೋಷಿಸಿದ್ದು , ಪ್ರದೇಶದವರು ಮನೆಯಿಂದ ಹೊರಬಾರದಂತೆ ಐಜಿಪಿ ವಿಜಯ್ ಸಾಕರೆ ತಿಳಿಸಿದ್ದಾರೆ . ಅಗತ್ಯ ವಸ್ತು ಮತ್ತು ಔಷಧಿಗಳನ್ನು ಪೊಲೀಸರೇ ಮನೆಗಳಿಗೆ ತಲಪಿಸುವರು. ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸುತ್ತಿದ್ದರೆಂದು ವೀಕ್ಷಿಸಲು ಈ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ . ಮನೆಯಿಂದ ಹೊರಬಂದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವರು. ವೈರಸ್ ಹರಡುತ್ತಿರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ