ಕಾಸರಗೋಡು, ಏ 07 (DaijiworldNews/SM): ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಮಂಗಳವಾರ ಕೂಡಾ ಜಿಲ್ಲೆಯಲ್ಲಿ ಹತ್ತು ವರ್ಷದ ಬಾಲಕ ಸೇರಿ ನಾಲ್ಕು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 155 ಕ್ಕೆ ತಲುಪಿದೆ.
ಸೋಂಕಿತರು ಪಳ್ಳಿಕೆರೆ, ಮೊಗ್ರಾಲ್, ಉದುಮ, ಮಧೂರಿನ ವ್ಯಕ್ತಿಗಳಾಗಿದ್ದು, ಓರ್ವ ಮಹಿಳೆ ಹಾಗೂ ಓರ್ವ ಹತ್ತು ವರ್ಷದ ಬಾಲಕ ಒಳಗೊಂಡಿದ್ದಾನೆ. ಈ ಪೈಕಿ ಇಬ್ಬರು ದುಬಾಯಿಯಿಂದ ಬಂದವರಾಗಿದ್ದಾರೆ. ಉಳಿದ ಇಬ್ಬರಿಗೆ ಸೋಂಕಿತರ ಸಂಪರ್ಕದಿಂದಾಗಿ ಕೊರೊನಾ ಸೋಂಕು ಬಂದಿದೆ. ಇನ್ನು ಮಂಗಳವಾರ 32 ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಸೋಮವಾರ ಜಿಲ್ಲೆಯಲ್ಲಿ ಓರ್ವ ಗುಣಮುಖನಾಗಿದ್ದಾನೆ. ಇನ್ನೂ 624 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಲಭಿಸಬೇಕಿದೆ.