ಸುಳ್ಯ ಸೆ೧೮:’ರಾಜ್ಯ ಸರಕಾರ ವಿಫಲ ಯೋಜನೆಗಳ ಸರಕಾರ’ ಎಂದು ಸುಳ್ಯದ ಶಾಸಕ ಅಂಗಾರ ವ್ಯಂಗ್ಯವಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಸುಳ್ಯ ಎಸ್.ಸಿ ಮೋರ್ಚಾ ವತಿಯಿಂದ ನಡೆದ ಬೃಹತ್ ಸಮರ್ಥನಾ ಸಮಾವೇಶದಲ್ಲಿ ಮಾತನಾಡಿದ ಅವರು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ವಿಫಲವಾಗಿದೆ. ಬಡವರಿಗಾಗಿ ಹಮ್ಮಿಕೊಂಡ ೯೪ ಸಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ಪೂರ್ಣ ಪ್ರಮಾಣದಲ್ಲಿ ನೀಡಲು ಇನ್ನು ಕೂಡಾ ಸಾಧ್ಯವಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್.ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮು,ಸುಳ್ಯ ಬಿ.ಜೆ.ಪಿ ಅಧ್ಯಕ್ಷ ವೆಂಕಟ್ ವಳಂಬೆ,ಜಿಲ್ಲಾ ಉಪಾಧ್ಯಕ್ಷೆ ಭಾಗಿರಥಿ ಮರುಳ್ಯ,ಜಿಲ್ಲಾ ಅಧ್ಯಕ್ಷ ದಿನೇಶ್ ಅಮ್ಟುರ್,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ,ಬಾಳಪ್ಪ ಕಳಂಜ,ಶೀನಪ್ಪ ಬಯಂಬು ಉಪಸ್ಥಿತರಿದ್ದರು.