ಬೆಂಗಳೂರು : ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳಿಗೆಯೇ ಸುರಕ್ಷತೆಯ ಪಾಠ ಹೇಳಿ ಕೊಟ್ಟ ಗೃಹರಕ್ಷಕಿಯ ವಿಡೀಯೋ ಇದೀಗ ವೈರಲ್ ಆಗಿದೆ. ಈ ಪಾಠದ ವಿಡೀಯೋ ಹಂಚಿಕೊಂಡಿದ್ದು ಸ್ವತಃ ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳಾಗಿರುವ ಸೌಮ್ಯ ರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ.
ಯಾವುದೋ ಸಭೆಯಲ್ಲಿ ಭಾಗವಹಿಸಿದ್ದ ಸೌಮ್ಯ ಅವರು ಸಭೆ ಮುಗಿಸಿ ಬಳಿಕ ಮನೆಯತ್ತ ಹೊರಟ್ಟಿದ್ದರು.ಈ ಸಂದರ್ಭ ಫುಟ್ಪಾತ್ನಲ್ಲಿ ನಿಂತು ಸಾರ್ವಜನಿಕರಿಗೆ ಜಾಗೃತಿ ಪಾಠ ಹೇಳುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮಿನರಸಮ್ಮ ಸೌಮ್ಯ ಅವರನ್ನು ಕಂಡು ತಡೆದು ನಿಲ್ಲಿಸಿ ಒಂದು ನಿಮಿಷ ಅವರಿಗೂ ಜಾಗೃತಿ ಪಾಠ ಹೇಳಿದ್ದರು. ಇದನ್ನು ಸೌಮ್ಯ ಅವರ ಸ್ನೇಹಿತರು ವಿಡೀಯೋ ಚಿತ್ರೀಕರಣ ಮಾಡಿದ್ದರು.
ಅವರ ಜಾಗೃತಿ ಪಾಠ ಕೇಳಿ ಖುಷಿಯಾದ ರೆಡ್ಡಿ ಮಗಳು ಈ ಸುರಕ್ಷತೆ ಪಾಠದ ವಿಡಿಯೊವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡೀಯೋ ವೈರಲ್ ಆಗಿದೆ. ಬೆಂಗಳೂರಿನಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದರೆ ಇಂಥವರ ಬದ್ಧತೆ ಕಾರಣ. ಲಕ್ಷ್ಮಿನರಸಮ್ಮ ಎಲ್ಲರಿಗೂ ಸ್ಫೂರ್ತಿದಾಯಕ ಕೆಲಸ ಮಾಡಿದ್ದಾರೆ. ಇದು ಮಹಿಳಾ ಸಬಲೀಕರಣ ಹೀಗಾಗಿ ನಿತ್ಯವೂ ಮಹಿಳಾ ದಿನಾಚರಣೆ’ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.