ಬಂಟ್ವಾಳ, ಎ.08 (Daijiworld News/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದ್ದು ಕರ್ನಾಟಕ ರಾಜ್ಯ ಸರ್ಕಾರ ರೇಷನ್ನ್ನು ಉಚಿತವಾಗಿ ನೀಡಬೇಕು ಎಂದು ಹೇಳಿದ್ದರೂ ತಾಲೂಕಿನ ಬರಿಮಾರು ಗ್ರಾಮ ಪಂಚಾಯತ್ನ ನ್ಯಾಯ ಬೆಲೆ ಅಂಗಡಿಯಲ್ಲಿ ಹಣ ಪಡೆದು ರೇಷನ್ ವಿತರಿಸುತ್ತಿದ್ದರು.
20 ರಿಂದ 30 ರೂಪಾಯಿ ಹಣ ಪಡೆಯುತ್ತಿದ್ದ ಕಾರಣದಿಂದಾಗಿ ಜನರು ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಒ) ಲಕ್ಷ್ಮಣ್ ಹೆಚ್.ಕೆ. ಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೂಡಲೇ ಎಚ್ಚೆತ್ತುಕೊಂಡ ಪಿಡಿಒ, ಪಂಚಾಯತ್ ಅಧ್ಯಕ್ಷರು ವಸಂತ್ ಹಾಗೂ ಸದಸ್ಯರಾದ ಹರಿಕೃಷ್ಣ ಹಾಗೂ ಇತರರು ಈ ಬಗ್ಗೆ ಚರ್ಚೆ ನಡೆಸಿದ್ದು ನ್ಯಾಯ ಬೆಲೆ ಅಂಗಡಿಯಲ್ಲಿ ಜನರಿಂದ ಪಡೆಯಲಾಗಿದ್ದ ಹಣವನ್ನು ಹಿಂದಕ್ಕೆ ನೀಡುವಂತೆ ಅಂಗಡಿ ಬಳಿ ತೆರಳಿ ಎಚ್ಚರಿಕೆ ನೀಡಿದ್ದು ನ್ಯಾಯ ಬೆಲೆ ಅಂಗಡಿ ಮಾಲೀಕ ಸನತ್ ಜನರಿಗೆ ಹಣವನ್ನು ವಾಪಾಸ್ ನೀಡಿದ್ದಾರೆ.