ಮಂಗಳೂರು, ಎ.08 (Daijiworld News/MB) : ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರಿನಲ್ಲೂ ಲಾಕ್ ಡೌನ್ ಹೇರಲಾಗಿರುವ ಹಿನ್ನಲೆಯಲ್ಲಿ, ನಗರದ ಪರಿಸ್ಥಿತಿ ಪರಿಶೀಲನೆಗಾಗಿ ಏ.8 ರ ಬುಧವಾರ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಶಾಸಕ ಯು. ಟಿ ಖಾದರ್ ಇವರಿಬ್ಬರೂ ದ್ವಿಚಕ್ರ ವಾಹನದಲ್ಲಿ ಸಿಟಿ ರೌಂಡ್ ಹೊಡೆದು ನಗರದ ಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.
ಲಾಕ್ಡೌನ್ ಇದ್ದರೂ ಅನಗತ್ಯವಾಗಿ ತಿರುಗಾಡುತ್ತಿದ್ದ ಕೆಲವರಿಗೆ ಮನೆಯಲ್ಲೇ ಇರುವಂತೆ ಶಾಸಕರು ತಿಳಿಸಿದರು.
ಇನ್ನು ನಗರದಲ್ಲಿ ಅನಗತ್ಯವಾಗಿ ಲಾಕ್ಡೌನ್ ಉಲ್ಲಂಘಿಸಿ ಜನರು ವಾಹನದಲ್ಲಿ ಸಂಚಾರ ಮಾಡುತ್ತಿದ್ದು ಈಗಾಗಲೇ ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.