ಮಂಗಳೂರು,ಏ 08 (Daijiworld News/MSP): ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್. 1 ಸ್ಥಾವರದಲ್ಲಿ ಪಂಪ್ ನಂ-1 ಹಾಗೂ ಎನ್.ಆರ್.ವಿ. ಚಕ್ ವಾಲ್ವ್ ಅಳವಡಿಸಬೇಕಾಗಿರುವುದರಿಂದ ಎಪ್ರಿಲ್ 9 ರಂದು ಬೆಳಿಗ್ಗೆ 8 ಗಂಟೆಯಿಂದ ಎಪ್ರಿಲ್ 10 ರಂದು ಬೆಳಿಗ್ಗೆ 8 ರವರೆಗೆ 24 ಗಂಟೆ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್.ಐ.ಟಿ.ಕೆ. ಸಸಿಹಿತ್ಲು, ಕೂಳೂರು, ಕೊಟ್ಟಾರ ಭಾಗಶಃ, ಬೆಂದೂರು ಲೋ-ಲೆವೆಲ್ ಪ್ರದೇಶಗಳಾದ ಕಾರ್ಸ್ಟ್ರೀಟ್, ಕುದ್ರೋಳಿ, ಫಿಷಿಂಗ್ ಹಾರ್ಬರ್, ಕೊಡಿಯಾಲ್ಬೈಲ್ ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಯಾಗಲಿದೆ.
ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಮಹಾನಗರಪಾಲಿಕೆಯೊಂದಿಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರು ವಿಭಾಗ-3, ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.