ಮಂಗಳೂರು, ಏ 08 (DaijiworldNews/SM): ಲಾಕ್ ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜನರನ್ನು ನಿಯಂತ್ರಿಸಿರುವುದರಿಂದ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಬುಧವಾರದಂದು ಉಭಯ ಜಿಲ್ಲೆಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ.
ದ.ಕ. ಜಿಲ್ಲೆಯಲ್ಲಿ ಬುಧವಾರ ಬಂದ ವರದಿ ಪ್ರಕಾರ 7 ಪರೀಕ್ಷಾ ವರದಿಗಳು ಲಭ್ಯವಾಗಿದೆ. ಈ ಎಲ್ಲಾ ಪರೀಕ್ಷಾ ವರದಿಗಳು ನೆಗೆಟಿವ್ ಆಗಿವೆ. ಇನ್ನು ಮಂಗಳೂರಿನಲ್ಲಿ ಪರೀಕ್ಷಾ ಲ್ಯಾಬ್ ಆರಂಭಿಸಿರುವುದರಿಂದ ಬುಧವಾರದಂದು, 9 ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಇನ್ನು 15 ಮಂದಿಯನ್ನು ನಿಗಾದಲ್ಲಿರಿಸಲಾಗಿದೆ. ಬುಧವಾರದಂದು 20 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. 3635 ಮಂದಿ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ. 11 ಮಂದಿ ಇ ಎಸ್ ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಇನ್ನು 2311 ಮಂದಿ 28 ದಿನಗಳ ಕ್ವಾರಂಟೈನ್ ಪೂರೈಸಿದ್ದಾರೆ.
ಉಡುಪಿ ಜಿಲ್ಲೆಯ ಬುಧವಾರದ ಕೊರೊನಾ ರಿಪೋರ್ಟ್:
ಕೊರೊನಾ ಸಂಬಂಧಿಸಿದಂತೆ ಪರೀಕ್ಷೆಗೆ ಕಳುಹಿಸಲಾಗಿರುವ 53 ಮಂದಿಯ ಪರೀಕ್ಷಾ ವರದಿ ಲಭ್ಯವಾಗಿದ್ದು, ಎಲ್ಲಾ ವರದಿಗಳು ನೆಗೆಟಿವ್ ಆಗಿದೆ. ಇನ್ನು ಮೂರು ಮಂದಿಯ ಗಂಟಲು ದ್ರವ ಪರಿಕ್ಷಾ ವರದಿಗೆ ಕಳುಹಿಸಲಾಗಿದೆ. ಇನ್ನು ಆರು ಮಂದಿ ಇಂದು ಆಸ್ಪತ್ರೆಯ ವಾರ್ಡ್ ನಿಂದ ಬಿಡುಗಡೆಹೊಂದಿದ್ದಾರೆ.