ಕಾಸರಗೋಡು, ಏ 08 (DaijiworldNews/SM): ಕಾಸರಗೋಡಿನಿಂದ ಮಂಗಳೂರಿಗೆ ತುರ್ತು ಚಿಕಿತ್ಸೆಗಾಗಿ ರೋಗಿಗಳುಲ್ಲ ಆಂಬ್ಯುಲೆನ್ಸ್ ಬರಲು ಅವಕಾಶ ನೀಡಲಾಗಿದೆ. ಅದರಂತೆ ಬುಧವಾರದಂದು ನಿಯಮದಂತೆ ಮಂಗಳೂರಿಗೆ ಕಾಸರಗೋಡಿನಿಂದ ರೋಗಿಯೊಬ್ಬರನ್ನು ಕರೆದುಕೊಂಡು ಆಂಬ್ಯುಲೆನ್ಸ್ ಬಂದಿದೆ. ಆದರೆ, ಮಂಗಳೂರು ಆಸ್ಪತ್ರೆಯಲ್ಲಿ ಆ ರೋಗಿಗೆ ಚಿಕಿತ್ಸೆ ಲಭಿಸಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಹಲವು ತಾಸುಗಳ ಕಾದ ಬಳಿಕ ರೊಂಗಿಯನ್ನು ಮತ್ತೆ ಕಾಸರಗೋಡಿಗೆ ಕರೆದೊಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದು, ಇದರಿಂದ ಒಂದೂವರೆ ಗಂಟೆಗೂ ಅಧಿಕ ಕಾಲ ಕಾದು ಕಾಸರಗೋಡಿಗೆ ಮರಳಿರುವುದಾಗಿ ಆರೋಪಿಸಲಾಗಿದೆ.
ಗಡಿಯಲ್ಲಿ ಉಭಯ ರಾಜ್ಯಗಳ ವೈದ್ಯಕೀಯ ತಪಾಸಣೆ ನಡೆಸಿ ಅಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ದಿದ್ದ ಕಾಸರಗೋಡು ತಳಂಗರೆಯ ಮಹಿಳೆಗೆ ಚಿಕಿತ್ಸೆ ನೀಡಲು ಮಾತ್ರವಲ್ಲ, ತಪಾಸಣೆಗೂ ವೈದ್ಯರು ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ. ಬಳಿಕ ಅಂಬ್ಯುಲೆನ್ಸ್ ಮೂಲಕ ಕಾಸರಗೋಡಿಗೆ ರೋಗಿಯನ್ನು ಕರೆದೊಯ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲಪಾಡಿ ಗಡಿಯಲ್ಲಿ ತಪಾಸಣೆ ಮೂಲಕ ಮಂಗಳೂರಿಗೆ ಪ್ರವೇಶ ನೀಡಿದರೂ ಆಸ್ಪತ್ರೆ ವೈದ್ಯರು ತಪಾಸಣೆಗೂ ಮುಂದಾಗಿಲ್ಲ ಎಂದು ರೋಗಿಗಳ ಸಂಬಂಧಿಕರು ಆರೋಪಿಸಿದ್ದಾರೆ.
ಕಾಸರಗೋಡಿನಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ಹಾಗೂ ವೈದ್ಯರಲ್ಲೂ ಭೀತಿ ಎದುರಾಗಿರುವ ಕಾರಣ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.