ಬೆಳ್ತಂಗಡಿ, ಏ 08 (DaijiworldNews/SM): ಕೊರೊನಾ ಲಾಕ್ಡೌನ್ ಸಂದರ್ಭ ಪ್ರಚೋದನಕಾರಿ ಮತ್ತು ಧರ್ಮನಿಂದನೆಯ ಸಂದೇಶಗಳನ್ನು ಕಿಡಿಗೇಡಿಗಳು ಹರಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ದ.ಕ. ಉಡುಪಿ ಜಿಲ್ಲೆಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಆದರೂ, ಆದೇಶ ಉಲ್ಲಂಘಿಸಿ ಸುಳ್ಳು ಸುದ್ದಿ ಹರಡುತ್ತಿದ್ದ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮುರಳೀಧರ, ವಿಜಯ, ಸುದೇಶ್ ಕುಮಾರ್, ಅಮೃತ್ರಾಜ್ ಅವರ ವಿರುದ್ಧ ಬಂದ ಸುಳ್ಳು ಸುದ್ದಿ ಹರಡಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸುಳ್ಳು ಸುದ್ದಿಗಳು, ವದಂತಿಗಳಳು ಹಾಗೂ ಸಮುದಾಯಗಳನ್ನು ನಿಂದಿಸುವವರು ಸಾಕಷ್ಟು ಮಂದಿ ಇದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.
ಇನ್ನು ಕೆಲವೊಂದು ವಾಟ್ಸಪ್ ಗ್ರೂಪ್ ಗಳಲ್ಲಿ ಬಂರುವ ವಿಷಯ ಸುದ್ದಿಗಳನ್ನು ಹಿಂದೆ ಮುಂದೆ ಯೋಚಿಸದೆ ಕೆಲವರು ಫಾರ್ವರ್ಡ್ ಮಾಡುತ್ತಾರೆ. ಅಂತಹವರು ಎಚ್ಚರವಾಗಬೇಕಾಗಿದೆ. ಏಕಾಏಕಿ ಸಂದೇಶ ಫಾರ್ವರ್ಡ್ ಮಾಡುವವರು ಜಾಗೃತಿಗೊಳ್ಳಬೇಕಾಗಿದೆ.