ಮಂಗಳೂರು, ಎ.09 (Daijiworld News/MB) : ದ.ಕ. ಜಿಲ್ಲಾ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ವಾಸವಿರುವ ಒಂಟಿ ಮಹಿಳೆಯರಿಗೆ ಮತ್ತು ವಯೋವೃದ್ದರಿಗೆ ಕೊರೊನಾ ವೈರಸ್ನ ಬಗ್ಗೆ ಸೂಕ್ತ ಮಾಹಿತಿ ನೀಡಲು ಹಾಗೂ ಅವರ ಆರೋಗ್ಯ/ಕುಂದುಕೊರತೆಗಳನ್ನು ತಿಳಿಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಅವರುಗಳಿಗೆ ಕರೆಮಾಡಿ ಸಂಪರ್ಕಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ವಾಸವಿರುವ 37,579 ವಯೋವೃದ್ಧರ ಹಾಗೂ ಒಬ್ಬಂಟಿಯಾಗಿ ವಾಸಿಸುತ್ತಿರುವ 268 ಮಹಿಳೆಯರ ಮಾಹಿತಿ ಪಡೆದು ಅವರನ್ನು ನೇರವಾಗಿ ಸಂಪರ್ಕಿಸುವ ಕಾರ್ಯ ಜಿಲ್ಲಾ ಪೊಲೀಸ್ ಕಚೇರಿಯಿಂದ ನಡೆಯುತ್ತಿದೆ.
ಒಬ್ಬಂಟಿಯಾಗಿ ವಾಸಿಸುತ್ತಿರುವ ಎಲ್ಲಾ ಮಹಿಳೆಯರನ್ನು ಸಂಪರ್ಕ ಮಾಡುವ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು ಈವರೆಗೆ 3,571 ವಯೋವೃದ್ಧರನ್ನು ಸಂಪರ್ಕ ಮಾಡಲಾಗಿದ್ದು ಈ ಸಂದರ್ಭದಲ್ಲಿ ಅವರ ಕುಂದು ಕೊರತೆಗಳ ಬಗ್ಗೆ ತಿಳಿದು ಅದನ್ನು ಪರಿಹಾರ ಮಾಡುವ ಸಲುವಾಗಿ ಪ್ರಯತ್ನ ಮಾಡಲಾಗುತ್ತಿದೆ.
ಇವರನ್ನು ಹೊತರು ಪಡಿಸಿ ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ವಯೋವೃದ್ಧರಿದ್ದಲ್ಲಿ ಅವರ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂ : 0824 - 2220508 ಕ್ಕೆ ನೀಡಬಹುದು ಎಂದು ದ. ಕ. ಜಿಲ್ಲಾ ಎಸ್ಪಿಯ ಪ್ರಕಟನೆ ತಿಳಿಸಿದೆ.