ಮಂಗಳೂರು, ಏ 09 (DaijiworldNews/SM): ದೇಶದಲ್ಲಿ ಕೊರೊನಾ ಮಹಾಮಾರಿಯ ಭೀತಿಯಿಂದ ಜನ ಮನೆಯೊಳಗೆ ಲಾಕ್ ಡೌನ್ ಆಗಿದ್ದಾರೆ. ಕೊರೊನಾ ವಿರುದ್ಧ ಎದೆಯೊಡ್ಡಿ ನಿಲ್ಲಲಾಗದ ಸ್ಥಿತಿಯಲ್ಲಿ ದೇಶವಿದ್ದು, ಆದರೂ ಹಗಲು ರಾತ್ರಿ ಸೋಂಕು ತಡೆಗೆ ವೈದ್ಯರು ಹೋರಾಡುತ್ತಿದ್ದಾರೆ.
ದೇಶದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಎಲ್ಲಾ ವೈದ್ಯರು, ದಾದಿಯರು ಹಾಗೂ ಮೆಡಿಕಲ್ ಸಿಬ್ಬಂದಿಗಳ ಸೇವೆ ನಿಸ್ವಾರ್ಥವಾಗಿದೆ. ಈ ಎಲ್ಲಾ ಸಿಬ್ಬಂದಿಗಳ ಸೇವೆ ಸ್ಮರಣೀಯ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಅವರು, ವೈದ್ಯರ ಸೇವೆ ನಿಸ್ವಾರ್ಥ ಹಾಗೂ ಅಮೂಲ್ಯವಾದುದು. ಅವರ ಜೀವದ ಹಂಗು ತೊರೆದು ನೀಡಿರುವ ಸೇವೆಯಿಂದಾಗಿ ಇಂದು ನಮ್ಮ ಸಮಾಜದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಜನರು ಇಲಾಖೆ ಹಾಗೂ ವೈದ್ಯರ ನಿದರ್ಶನಗಳನ್ನು ಸ್ವೀಕರಿಸಬೇಕಾಗಿದೆ. ಹಾಗೂ ಕೊರೊನಾ ನಿಯಂತ್ರಣದ ಪಣವನ್ನು ಪಡೆದುಕೊಳ್ಳಬೇಕೆಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.