ಕಾರ್ಕಳ, ಏ 10 (Daijiworld News/MSP): ಹೆಬ್ರಿ ಶಿವಪುರದ ಖಜಾನೆಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಠಾಣೆಯ ಉಪನಿರೀಕ್ಷಕರು ಬುಧವಾರದಂದು ಬಂಧಿಸಿದ್ದಾರೆ. ಶಿವಪುರದ ಖಜಾನೆಯ ನಿವಾಸಿ ಕೃಷ್ಣ ಶೆಟ್ಟಿ(42) ಬಂಧಿತ.
ಆರೋಪಿಯು ಸಾರ್ವಜನಿಕ ಸ್ಥಳದಲ್ಲಿ ನೆಲದ ಮೇಲೆ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯವನ್ನು ಇಟ್ಟು ಕೊಂಡು ಬಂದ ಗಿರಾಕಿಗಳಿಗೆ ಪ್ಲಾಸ್ಟಿಕ್ ಲೋಟದಲ್ಲಿ ಮದ್ಯವನ್ನು ಸೇವಿಸಲು ಅನುವು ಮಾಡಿಕೊಡುವುದನ್ನು ಖಚಿತ ಮಾಹಿತಿ ಪಡೆದು ದಾಳಿ ಮಾಡಿದಾಗ ಮದ್ಯ ಕುಡಿಯಲು ಬಂದವರು ಓಡಿ ಹೋಗಿರುತ್ತಾರೆ.
ಪರಾರಿಯಾಗಲು ಪ್ರಯತ್ನಿಸಿ ಹೆಸರು ಕೃಷ್ಣ ಶೆಟ್ಟಿ ( 42) ಪೊಲೀಸರು ಬಂಧಿಸಿದ್ದಾರೆ. ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ನ ಮೈಸೂರು ಲ್ಯಾನ್ಸರ್ ವಿಸ್ಕಿ ಕಂಪನಿಯ ಮದ್ಯ ತುಂಬಿದ 10 ಬಾಟಲಿಗಳು ಪತ್ತೆಯಾಗಿದ್ದು, ಅದರಲ್ಲಿ 2 ಬಾಟಲಿಗಳಲ್ಲಿ ಅರ್ಧ ತುಂಬಿದ ಮದ್ಯ ಇರುತ್ತದೆ. ಇವುಗಳ ಒಟ್ಟು ಮೌಲ್ಯ 300 ರೂಪಾಯಿ ಅಗಿರುತ್ತದೆ. ನೆಲದ ಮೇಲೆ ಗಿರಾಕಿಗಳು ಮದ್ಯ ಕುಡಿದು ಬಿಟ್ಟು ಹೋಗಿದ್ದ 90 ಎಂ.ಎಲ್ ನ ಮೈಸೂರು ಲ್ಯಾನ್ಸರ್ ವಿಸ್ಕಿ ಕಂಪನಿಯ 4 ಖಾಲಿ ಬಾಟಲಿಗಳು ಹಾಗೂ ಆರೋಪಿತನು ಗಿರಾಕಿಗಳಿಂದ ಸಂಗ್ರಹಿಸಿದ 120 ರೂಪಾಯಿ. ಬಿಳಿ ಪ್ಲಾಸ್ಟಿಕ್ ಚೀಲ ಇವುಗಳನ್ನು ಸ್ವಾಧೀನಪಡಿಸಿದ ಪೊಲೀಸರು ಕೇಸು ದಾಖಲಿಸಿದ್ದಾರೆ.