ಉಡುಪಿ, ಎ.10 (Daijiworld News/MB) : ಲಾಕ್ಡೌನ್ ಉಲ್ಲಂಘನೆ ಮಾಡಿ ಏಪ್ರಿಲ್ 9 ರ ಗುರುವಾರ ಚರ್ಚ್ನಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ನಾಡಾ ಗ್ರಾಮದ ಪಡುಕೋಣೆಯ ಸೇಂಟ್ ಅಂತೋನಿ ಚರ್ಚ್ನ ಫಾದರ್ ಫ್ರೆಡ್ ಮಸ್ಕರೇನ್ಹಾಸ್ ಹಾಗೂ ಇತರ ಆರು ಜನರ ಮೇಲೆ ದೂರು ದಾಖಲು ಮಾಡಲಾಗಿದೆ.
ನಾಡಾ ಗ್ರಾಮ ಪಂಚಾಯಿತಿಯ ಪಿಡಿಒಗೆ ಏಪ್ರಿಲ್ 9 ರಂದು ಸೇಂಟ್ ಆಂಟನಿ ಚರ್ಚ್ನಲ್ಲಿ ಪಾದ್ರಿ ಮತ್ತು ಆರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ದೂರು ಬಂದಿದ್ದು ಪಿಡಿಒ ಸ್ಥಳಕ್ಕೆ ಭೇಟಿ ನೀಡಿದಾಗ ಪಾದ್ರಿ ಮತ್ತು ಇತರ ಆರು ಜನರು ಸಾಮೂಹಿಕ ಪ್ರಾರ್ಥನೆ ನಡೆಸುತ್ತಿರುವುದು ಕಂಡು ಬಂದಿದೆ.
ಈ ವಿಷಯವನ್ನು ಪಿಡಿಒ ಬೈಂದೂರ್ ತಹಶೀಲ್ದಾರ್ ಬಸಪ್ಪ ಪಿ ಪೂಜಾರಿ ಮತ್ತು ತಾಲ್ಲೂಕು ದಂಡಾಧಿಕಾರಿ ಗಮನಕ್ಕೆ ತಂದಿದ್ದು ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಕುರಿತಾಗಿ ತಹಶೀಲ್ದಾರ್ ಮತ್ತು ದಂಡಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತಾಗಿ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತನಿಖೆ ನಡೆಸುತ್ತಿದ್ದಾರೆ.