ಮಂಗಳೂರು, ಎ.10 (Daijiworld News/MB) : ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಕಷ್ಟಲ್ಲಿರುವ ಬಡ ಕುಟುಂಬಕ್ಕೆ ಸಹಾಯ ಮಾಡಲು ದಾಯ್ಜಿವರ್ಲ್ಡ್ ಆರಂಭ ಮಾಡಿದ "ನಾವು ನಿಮ್ಮೊಂದಿಗೆ" ಅಭಿಯಾನಕ್ಕೆ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಗಣೇಶ್ ರಾವ್ ಅವರು ಕಿಟ್ಗಳನ್ನು ಬಡವರಿಗೆ ಹಸ್ತಾಂತರಿಸುವ ಮೂಲಕ ಕೈಜೋಡಿದ್ದಾರೆ.
ಈ ಕಿಟ್ನಲ್ಲಿ ಅಕ್ಕಿ, ಬೇಳೆ, ಗೋಧಿ ಪುಡಿ, ಮೆಣಸು, ಈರುಳ್ಳಿ, ಚಹಾದ ಪುಡಿ, ಸಕ್ಕರೆ ಸೇರಿದಂತೆ 7 ಸಾಮಾಗ್ರಿಗಳು ಇದೆ.
ಈ ಕುರಿತಾಗಿ ದಾಯ್ಜಿವರ್ಲ್ಡ್ನೊಂದಿಗೆ ಮಾತನಾಡಿದ ಗಣೇಶ್ ರಾವ್ ಅವರು, "ನಾವು ಈಗಾಗಲೇ ಕರಾವಳಿ ಸಮೂಹ ಸಂಸ್ಥೆಯ ವತಿಯಿಂದ 1000 ಕಿಟ್ಗಳನ್ನು ವಿತರಿಸುವ ಮೂಲಕ ಅಗತ್ಯವಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದೇವೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲಾ ಪಕ್ಷದ, ಧರ್ಮದ ಜನರು ಜೊತೆಯಾಗಿದ್ದಾರೆ. ದಾಯ್ಜಿವರ್ಲ್ಡ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾದ ಕಾರಣದಿಂದಾಗಿ ನಾವು ಈಗಾಗಲೇ 1000 ಕಿಟ್ಗಳನ್ನು ವಿತರಿಸಿದ್ದರು ದಾಯ್ಜಿವರ್ಲ್ಡ್ ಮುಖಾಂತರ ಕಿಟ್ಗಳನ್ನು ಬಡವರಿಗೆ ಹಸ್ತಾಂತರ ಮಾಡುತ್ತಿದ್ದೇವೆ. ಮಾಧ್ಯಮಗಳು ಇಂತಹ ಅಭಿಯಾನವನ್ನು ಮುನ್ನಡೆಸುವಾಗ ಅದಕ್ಕೆ ಬೆಂಬಲ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ ಅವರು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಬೆಂಬಲಿಸಬೇಕು ಎಂದರು.