ಕಾಸರಗೋಡು, ಏ 10 (Daijiworld News/MSP): ಕೊರೊನಾ ವೈರಸ್ ನಿಂದ ಕಾಸರಗೋಡು ಜಿಲ್ಲೆಗೆ ಕೊಂಚ ನೆಮ್ಮದಿಯ ವರದಿಗಳು ಬರತೊಡಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹದಿನೈದು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸೋಂಕಿತ 160 ಮಂದಿಯಲ್ಲಿ 138 ಮಂದಿ ಮಾತ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 22 ಮಂದಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯ ಮೊದಲ ಕೊರೋನಾ ಸೋಂಕಿತ ಕಳ್ನಾಡ್ ನಿವಾಸಿ ಶುಕ್ರವಾರ ಬಿಡುಗಡೆ ಗೊಂಡವರಲ್ಲಿ ಸೇರಿದ್ದಾರೆ
ಇಂದು ಕಾಸರಗೋಡು ಜನರಲ್ ಆಸ್ಪತ್ರೆ ಯಿಂದ ಆರು , ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಯಿಂದ ಆರು ಹಾಗೂ ಜಿಲ್ಲಾಸ್ಪತ್ರೆಯಿಡ ಮೂವರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ . ಸಂಜೆಯೊಳಗೆ ಇನ್ನಷ್ಟು ಸೋಂಕಿತರ ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಎ. ವಿ ರಾಮ್ ದಾಸ್ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಕೊರೋನಾ ಪತ್ತೆಯಾದ 160 ಮಂದಿಯಲ್ಲಿ 120 ಕ್ಕೂ ಅಧಿಕ ಮಂದಿ ವಿದೇಶದಿಂದ ಬಂದವರಾಗಿದ್ದು , 40 ರಷ್ಟು ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿದೆ. ಅದರಲ್ಲೂ ಸೋಂಕಿತರ ಮನೆಯವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಸೋಂಕು ಹರಡಿದ್ದು , ಸಾರ್ವಜನಿಕ ವಾಗಿ ಸೋಂಕು ಹರಡಿಲ್ಲ. ಇದು ಜಿಲ್ಲೆಯ ಜನತೆಯಲ್ಲಿ ನೆಮ್ಮದಿ ತಂದಿದೆ.ಕಳೆದ ಕೆಲ ದಿನಗಳನ್ನು ಅವಲೋಕಿಸಿದಾಗ ನಿಗಾ ದಲ್ಲಿರುವವವರ ಸಂಖ್ಯೆಯೂ ಇಳಿಮುಖವಾಗುತ್ತಿದ್ದು , ಮುಂದಿನ ಎರಡು ಅಥವಾ ಮೂರು ದಿನಗಳು ನಿರ್ಣಾಯಕ ವಾಗಿದೆ