ಉಡುಪಿ, ಏ 10 (Daijiworld News/MSP): ಕೋವಿಡ್-19 ತಡೆಗಟ್ಟಲು ಜಿಲ್ಲೆಯಾದ್ಯಂತ ಈಗಾಗಲೇ ಸೆಕ್ಷನ್ 144(3) ಆದೇಶ ಜಾರಿಯಲ್ಲಿದೆ. ಅದರಂತೆ ಸಾರ್ವಜನಿಕರು ಹೊರಗಡೆ ಸಂಚರಿಸುವುದುನ್ನು ನಿಷೇಧಿಸಲಾಗಿದೆ.
ಆದರೆ ಸಣ್ಣಪುಟ್ಟ ಕಾರಣಕ್ಕೆ ಅನುಮತಿ ಪತ್ರ ಕೋರಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸರ್ಕಾರದ ಅದೇಶದ ಉಲ್ಲಂಘನೆಯಾಗಿದೆ.
ಆದ್ದರಿಂದ ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಅನಾವಶ್ಯಕವಾಗಿ ಅನುಮತಿ ಪಡೆಯಲು ಏಪ್ರಿಲ್ 14 ರ ವರೆಗೆ ಬರುವುದನ್ನು ನಿಷೇಧಿಸಲಾಗಿದೆ ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೆಲೆಯಲ್ಲಿ, ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳು , ವೈದ್ಯಕೀಯ ದೃಢಪತ್ರದೊಂದಿಗೆ ಸಾರ್ವಜನಿಕರಿಗೆ ಅನುಮತಿ ಪಡೆಯಲು ಮಾತ್ರ ಅವಕಾಶ ನೀಡಲಾಗಿದ್ದು, ಇದರ ಹೊರತು ಬೇರೆ ಯಾವುದೇ ಅನುಮತಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.