ಸುಳ್ಯ, ಏ10 (Daijiworld News/MSP): ಲಾಕ್ ಡೌನ್ ಹಿನ್ನೆಲೆಯಲ್ಲಿ ತುರ್ತು ಔಷಧಿಗಾಗಿ ವಯೋವೃದ್ದೆ ಮಹಿಳೆಯೊಬ್ಬಳು ಸುಮಾರು 15 ಕಿಮೀ ನಡೆದೇ ಬಂದ ಘಟನೆ ಸುಳ್ಯದಲ್ಲಿ ನಡೆದಿದೆ.
ಕೊಲ್ಲಮೊಗ್ರದ ವೃದ್ಧೆಯೊಬ್ಬರು ಔಷಧಕ್ಕಾಗಿ ವಾಹನವಿಲ್ಲದ ಕಾರಣ 15 ಕಿ.ಮೀ. ದೂರದ ಗುತ್ತಿಗಾರಿಗೆ ನಡೆದಾಡಿಕೊಂಡೇ ಬಂದಿದ್ದರು.ಗುತ್ತಿಗಾರಿಗೆ ಆಗಮಿಸಿದಾಗ ತುಂಬಾ ನಿತ್ರಾಣ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ವಿಷಯ ತಿಳಿದುಬಂದಿದೆ.
ಬಳಿಕ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಹಾಗೂ ಸ್ಥಳೀಯ ಪೋಲೀಸರ ನೆರವಿನೊಂದಿಗೆ ಔಷಧೀಯ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.