ಮಂಗಳೂರು, ಏ10 (Daijiworld News/MSP): ಕೇರಳದಿಂದ ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಏಳು ಜನರ ತಂಡವನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದು, ಅಕ್ರಮವಾಗಿ ಮಂಗಳೂರು ಪ್ರವೇಶಿಸಿದ ಯಾಕೂಬ್ (48) ಮತ್ತು ಆತನ ಕುಟುಂಬದ ಆರು ಜನರನ್ನು ಬಂಧಿಸಿ, ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಈತನಿಗೆ ತಲಪಾಡಿಗೆ ಬರಲು ಹಾಗೂ ಗಡಿ ದಾಟಲು ಸಹಾಯ ಮಾಡಿದಾತನನ್ನು ಶಾಕೀರ್ ಎಂದು ಗುರುತಿಸಲಾಗಿದೆ.
ಸಂಕ್ರಾಮಿಕ ರೋಗ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಧಿಸಿದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಯಾಕೂಬ್ ಹಾಗೂ ಉಳಿದ ಆರು ಮಂದಿಯ ವಿರುದ್ದ ಬಜ್ಪೆ ಪೊಲೀಸ್ ಠಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದ್ದು ಇವರನ್ನು 14 ದಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಲಾಕ್ ಡೌನ್ ಸಂಬಂಧ ಕರ್ನಾಟಕ- ಕೇರಳ ಗಡಿ ಬಂದ್ ಆಗಿದ್ದು ಈ ಕಾರಣದಿಂದ, ಈ ಏಳು ಜನರು ದೋಣಿ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರು ಪ್ರವೇಶಿಸಿ ಅಡ್ಡೂರು ತಲುಪಿತ್ತು.
ದೋಣಿ ಮತ್ತು ಏಳು ಜನರನ್ನು ಮಂಗಳೂರು ತಲುಪಿಸಿದವರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇವರಿಗೆ ಸಹಾಯ ಮಾಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.